ಮಂಗಳೂರು ಮಂಗಳೂರಿನ ಗಂಜಿಮಠದ ಒಡ್ಡೂರು ಫಾರ್ಮ್ನಲ್ಲಿ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಉಪ ಚುನಾವಣೆ ಎದುರಿಸುವ ಕುರಿತು ಪಕ್ಷದ ಪ್ರಮುಖರ ಸಭೆ ನಡೆಸಲಾಯಿತು. ಪಕ್ಷದ ಸುಭದ್ರ ಕೋಟೆಯಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಒಗ್ಗಟ್ಟಿನಿಂದ ಶ್ರಮಿಸುವ ಕುರಿತು ಚರ್ಚಿಸಲಾಯಿತು
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಸಹ ಉಸ್ತುವಾರಿಗಳಾದ ಶ್ರೀ ರೆಡ್ಡಿ ಶಂಕರ್ , ವಿರೋಧ ಪಕ್ಷ ನಾಯಕರಾದ ಶ್ರೀ R ಅಶೋಕ್ ಬಿಜೆಪಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಶ್ರೀಎನ್ ಸ್ವಾಮಿ ಚಲವಾದಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಕಾರ್ಕಳ ಸುನೀಲ್ ಸಂಸದರಾದ ಶ್ರೀಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ,ಸಂಸದ ಕ್ಶಾ. ಬೃಜೇಶ್ ಚೌಟ
ಶಾಸಕರಾದ ರಾಜೇಶ್. ನಾಯ್ಕ್, ಶ್ರೀ ಉಮಾನಾಥ ಕೋಟಯಾನ್, ಡಾ.ಭರತ್.ಶೆಟ್ಟಿ.ವೃ ಶ್ರೀ ವೇದವ್ಯಾಸ್ ಕಾಮತ್ , ವಿಧಾನ ಪರಿಷತ್ ಸದಸ್ಯರಾದ ಶ್ರೀ ಪ್ರತಾಪಸಿಂಹ ನಾಯಕ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅಭ್ಯರ್ಥಿ ಶ್ರೀ ಕಿಶೋರ್ ಪುತೂರ್ ಜಿಲ್ಲಾಧ್ಯಕ್ಷರಾದ ಶ್ರೀಸತೀಶ್ ಕುಂಪುಲಾ ಸೇರಿದಂತೆ ಪಕ್ಷದ ಪದಾಧಿಕಾರಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

