ಹೊಸದಿಲ್ಲಿ : ಅಬಕಾರಿ ನೀತಿ ಹಗರಣದಲ್ಲಿ ಬಂಧಿತನಾಗಿ 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾಗಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜಿವಾಲ್ ಎರಡು ದಿನಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ.
ಅಂತೆಯೇ ಜನರು ಪ್ರಾಮಾಣಿಕನೆಂಬ ಸರ್ಟಿಫಕೇಟ್ ಕೊಡುವವರೆಗೂ ನಾನು ಮುಖ್ಯಮಂತ್ರಿ ಗಾದಿಯಲ್ಲಿ ಕೂರುವುದಿಲ್ಲ ಎಂದಿರುವ ದಿಲ್ಲಿ ಕೇಜಿವಾಲ್, ದಿಲ್ಲಿಯಲ್ಲಿ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಆಗ್ರಹಿಸಿದ್ದಾರೆ. ಆದರೆ, ಇದೊಂದು ಸ್ಪಂಟ್ ಮತ್ತು ಪ್ರಹಸನ ಎಂದು ಕೇಬ್ರಿವಾಲ್ ನಡೆಯನ್ನು ಬಿಜೆಪಿ ಟೀಕಿಸಿದೆ