ಅಹಮದಾಬಾದ್ : ದೇಶದ ರೈಲ್ವೆ ಮೂಲಸೌಕರ್ಯ ಉತ್ತೇಜಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭುಜ್ ಮತ್ತು ಅಹಮದಾಬಾದ್ ಮಾರ್ಗದ ನಮೋ ಭಾರತ್ ರ್ಯಾಪಿಡ್ ರೈಲು ಎಂದು ರೈಲ್ವೆ ಸಚಿವಾಲಯದಿಂದ ಮರು ನಾಮಕರಣಗೊಂಡಿರುವ ದೇಶದ ಮೊದಲ ವಂದೇ ಮೆಟ್ರೋ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು
ಆಹಮದಾಬಾದ್‌ನಲ್ಲಿ ಭುಜ್ -ಅಹಮದಾಬಾದ್ ನಮೋ ಭಾರತ್ ರಾಪಿಡ್ ರೈಲು ಸೇರಿ, ಮೊದಲ ವಂದೇ ಭಾರತ್ ಮೆಟ್ರೋ ಸೇವೆ ಮತ್ತು ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಹಸಿರು ನಿಶಾನೆ ತೋರಿದರು. ಅಹಮದಾಬಾದ್-ಭುಜ್ ನಡುವಿನ ವಂದೇ ಮೆಟ್ರೋ ಸೇವೆಯು ಒಂಬತ್ತು ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಗಂಟೆಗೆ 110 ಕಿಲೋಮೀಟರ್ ವೇಗದಲ್ಲಿ 360 ಕಿಲೋಮೀಟರ್ ದೂರವನ್ನು 5 ಗಂಟೆ 45 ನಿಮಿಷಗಳಲ್ಲಿ ಕ್ರಮಿಸುತ್ತದೆ. ಭುಜ್ ನಿಂದ ಬೆಳಿಗ್ಗೆ 5:05 ಕ್ಕೆ ಹೊರಟು 10:50 ಕ್ಕೆ ಅಹಮದಾಬಾದ್ ಜಂಕ್ಷನ್‌ಗೆ ತಲುಪಲಿದೆ ಎಂದು ಪಶ್ಚಿಮ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.