Home » ಇಂದು ಕೇಜ್ರಿವಾಲ್‌ ರಾಜೀನಾಮೆ ಸಾಧ್ಯತೆ
 

ಇಂದು ಕೇಜ್ರಿವಾಲ್‌ ರಾಜೀನಾಮೆ ಸಾಧ್ಯತೆ

by Kundapur Xpress
Spread the love

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಲೆಫ್ಟಿನೆಂಟ್ ಗವರ್ನರ್ ವಿ. ಕೆ. ಸಕ್ಲೇನಾ ಅವರನ್ನು ಭೇಟಿ ಮಾಡಲು ಸಮಯ ಕೋರಿದ್ದು ಇಂದು ಮಂಗಳವಾರ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದೆ. ಹೊಸ ಮುಖ್ಯಮಂತ್ರಿಯನ್ನು ನಿರ್ಧರಿಸಲು ಸೋಮವಾರ ಸಂಜೆ ತನ್ನ ರಾಜಕೀಯ ವ್ಯವಹಾರಗಳ ಸಮಿತಿ ಸೇರಿದಂತೆ ಸರಣಿ ಸಭೆಗಳನ್ನು ನಡೆಸಿದ ಆಮ್ ಆದಿ ಪಕ್ಷ ಸುದೀರ್ಘ ಮಾತುಕತೆಗಳನ್ನು ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಆಪ್, ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯೊಂದಿಗೆ ದಿಲ್ಲಿಯಲ್ಲೂ ಚುನಾವಣೆ ನಡೆಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಈ ಮಧ್ಯೆ ಬಿಜೆಪಿ, ಕೇಬ್ರಿವಾಲ್ ತಮ್ಮ ರಾಜೀನಾಮೆ ನಾಟಕವಾಡುವ ಬದಲು ದಿಲ್ಲಿ ವಿಧಾನಸಭೆ ವಿಸರ್ಜಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

   

Related Articles

error: Content is protected !!