ಕುಂದಾಪುರ : ವಿಶ್ವಕರ್ಮ ಜಯಂತಿಯು ಕೇವಲ ದೈವಿಕ ವಾಸ್ತುಶಿಲ್ಪಿಗಳ ಜನ್ಮದಿನವನ್ನು ಆಚರಿಸುವ ದಿನವಲ್ಲ ಆದರೆ ಕುಶಲಕರ್ಮಿಗಳು ಮತ್ತು ಕಾರ್ಮಿಕರ ಕೊಡುಗೆಗಳನ್ನು ಗುರುತಿಸುವ ಸಂದರ್ಭವಾಗಿದೆ.ಇಂದು ಕುಂದಾಪುರ ತಾಲೂಕು ಆಡಳಿತ ಸೌಧದ ಕೋರ್ಟ್ ಹಾಲ್ ನಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಕುಂದಾಪುರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅವರು ನಮ್ಮ ಜಗತ್ತನ್ನು ನಿರ್ಮಿಸಲು ಮತ್ತು ರೂಪಿಸಲು ತಮ್ಮ ಕೈಗಳಿಂದ ಕೆಲಸ ಮಾಡುವವರ ಕೌಶಲ್ಯ, ಸಮರ್ಪಣೆ ಮತ್ತು ಸೃಜನಶೀಲತೆಯನ್ನು ಪ್ರಶಂಸಿಸಲು ಇದು ಒಂದು ದಿನವಾಗಿದೆ.ಈ ಹಬ್ಬವು ಸಮಾಜದಲ್ಲಿ ಕರಕುಶಲತೆಯ ಮಹತ್ವ ಮತ್ತು ಶ್ರಮದ ಮೌಲ್ಯವನ್ನು ಒತ್ತಿಹೇಳುತ್ತದೆ ಎಂದು ತಿಳಿಸಿದರು.
ಕುಂದಾಪುರ ತಾಲೂಕು ದಂಡಾಧಿಕಾರಿ ಶ್ರೀಮತಿ ಶೋಭಾ ಲಕ್ಷ್ಮಿ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು.ಸದ್ರಿ ಈ ಕಾರ್ಯಕ್ರಮದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷರಾದ ಶ್ರೀಧರ್ ಆಚಾರ್ಯ,ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ ನಾರಾಯಣ ಆಚಾರ್ಯ, ಹಾಗೂ ವಿಶ್ವಕರ್ಮ ಸಮಾಜದ ಮುಖಂಡರು, ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮದ ನಿರೂಪಣೆ ಹಾಗೂ ಧನ್ಯವಾದಗಳು ಉಪ ತಹಶೀಲ್ದಾರ್ ವಿನಯ್ ಅವರು ನಿರ್ವಹಿಸಿದರು.