Home » ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಪತ್ತೆ
 

ತಿರುಪತಿ ಲಡ್ಡಿನಲ್ಲಿ ದನದ ಕೊಬ್ಬು ಪತ್ತೆ

by Kundapur Xpress
Spread the love

ಅಮರಾವತಿ : ‘ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದದಲ್ಲಿ ಹಿಂದಿನ ಜಗಮ್ಮೋಹನ ರೆಡ್ಡಿ ನೇತೃತ್ವದ ವೈಎಸ್ಸಾರ್ ಕಾಂಗ್ರೆಸ್ ಸರ್ಕಾರ ತುಪ್ಪದ ಬದಲು ಪ್ರಾಣಿಗಳ ಕೊಬ್ಬು ಬಳಸುತಿತ್ತು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಾಡಿದ ಆರೋಪ ಗಳಿಗೆ ಸಾಕ್ಷಿಯಾಗಿ ಪ್ರಯೋಗಾಲಯದ ವರದಿಯೊಂದನ್ನು ನಾಯ್ಡು ಅವರ ತೆಲುಗುದೇಶಂ ಪಕ್ಷ (ಟಿಡಿಪಿ) ಬಿಡುಗಡೆ ಮಾಡಿದೆ.

ಜು.17ನೇ ತಾರೀಖಿನ ವರದಿಯಲ್ಲಿ ತಿರುಪತಿ ಲಡ್ಡು ಪ್ರಸಾದದ ತುಪ್ಪದಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಹಾಗೂ ಹಂದಿಕೊಬ್ಬಿನ ಕುರುಹುಗಳಿವೆ’ ಎಂದು ಬರೆಯಲಾಗಿದೆ. ಇದು ಜಗನ್ ಅವಧಿಯಲ್ಲಿನ ಪ್ರಸಾದ ತಪಾಸಿಸಿ ಸಿದ್ಧಪಡಿಸಿದ ವರದಿಯಾಗಿದೆ.

ಈ ವರದಿಯನ್ನು ಗುರುವಾರ ಬಿಡುಗಡೆ ಮಾಡಿದ ತೆಲುಗುದೇಶಂ ನಾಯಕ ಅನಂ ರೆಡ್ಡಿ, ‘ಈ ವರದಿಯಿಂದ ಜಗನ್ ಸರ್ಕಾರ ಎಸಗಿದ ಕೃತ್ಯ ಸಾಬೀತಾಗಿದೆ. ಅವರು ಪ್ರಸಾದದಲ್ಲಿ ಅದ್ಯಾವ ಕೊಬ್ಬು – ಬಳಸಿದ್ದಾರೋ? ಹಂದಿ ಕೊಬ್ಬೋ, ದನದ ಕೊಬ್ಬೋ, ನಾಯಿ ಕೊಟ್ಟೋ ? ಎಂದು ಆಕ್ರೋಶ ವ್ಯಕ್ತಪಡಿಸಿದರು

   

Related Articles

error: Content is protected !!