Home » 297 ಪ್ರಾಚ್ಯ ವಸ್ತು ಭಾರತಕ್ಕೆ ವಾಪಾಸ್
 

297 ಪ್ರಾಚ್ಯ ವಸ್ತು ಭಾರತಕ್ಕೆ ವಾಪಾಸ್

by Kundapur Xpress
Spread the love

ನವದೆಹಲಿ : ವಿವಿಧ ಕಾಲಘಟ್ಟದಲ್ಲಿ ಭಾರತದಿಂದ ಅಮೆರಿಕಕ್ಕೆ ಕಳ್ಳಸಾಗಣೆ ಮಾಡಲಾಗಿದ್ದ ಅಪರೂಪದ 297 ಪ್ರಾಚೀನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ವೇಳೆ ಅಮೆರಿಕವು ಭಾರತಕ್ಕೆ ಮರಳಿಸಿದೆ. ಇದರೊಂದಿಗೆ 2014ರ ಬಳಿಕ ಅಮೆರಿಕವು ಭಾರತಕ್ಕೆ ಮರಳಿಸಿದ ಇಂಥ ಪ್ರಾಚೀನ ವಸ್ತುಗಳ ಸಂಖ್ಯೆ 640ಕ್ಕೆ ಏರಿದೆ. ಇದು ಯಾವುದೇ ದೇಶವೊಂದು ಭಾರತಕ್ಕೆ ಮರಳಿಸಿದ ಗರಿಷ್ಠ ಪ್ರಮಾಣದ ಪ್ರಾಚೀನ ವಸ್ತುವಾಗಿದೆ.

ಮರಳಿಸಲಾದ ವಸ್ತುಗಳಲ್ಲಿ 10-11 ನೇ ಶತಮಾನದ ಮರಳುಗಲ್ಲಿನ ‘ಅಪ್ಸರಾ’ ಶಿಲ್ಪ, 15-16 ನೇ ಶತಮಾನದ ಕಂಚಿನ ಜೈನ ತೀರ್ಥಂಕರ ಪ್ರತಿಮೆ, ಪೂರ್ವ ಭಾರತದ ಟೆರಾಕೋಟಾ ಹೂದಾನಿ, 1ನೇ ಶತಮಾನದ ದಕ್ಷಿಣ ಭಾರತದ ಕಲ್ಲಿನ ಶಿಲ್ಪ,17-18 ನೇ ಶತಮಾದ ದ. ಭಾರತದ ಕಂಚಿನ ಗಣೇಶ, 15-16 ನೇ ಶತಮಾನದ ಬುದ್ದನ ಮರಳುಗಲ್ಲು ಪ್ರತಿಮೆ, 17-18ನೇ ಶತಮಾನದ ಪೂರ್ವ ಭಾರತದ ಕಂಚಿನ ಭಗವಾನ್ ವಿಷ್ಣು ಇದರಲ್ಲಿ ಸೇರಿವೆ.

   

Related Articles

error: Content is protected !!