ಕೊಲಂಬೊ : ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರ ಸೂರ್ಯ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದು,ಈ ಮೂಲಕ ಶ್ರೀಲಂಕಾದಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ ಮೂರನೇ ಮಹಿಳೆ ಎನಿಸಿದ್ದಾರೆ. ‘ನ್ಯಾಷನಲ್ ಪೀಪಲ್ಸ್ ಪವರ್’ (ಎನ್ಪಿಪಿ) ಪಕ್ಷದ 54 ವರ್ಷದ ಹರಿಣಿಯವರಿಗೆ ಅಧ್ಯಕ್ಷ ಅನುರಾ ಕುಮಾರ್ ದಿಸಾನಾಯಕೆ ಪ್ರಮಾಣ ವಚನ ಬೋಧಿಸಿದರು. ಇದಕ್ಕೂ ಮುನ್ನ, ದಿನೇಶ್ ಗುಣವರ್ಧನೆ ರಾಜೀನಾಮೆಯಿಂದ ತೆರವಾಗಿದ್ದ ಪ್ರಧಾನಿ ಸ್ಥಾನಕ್ಕೆ ಹರಿಣಿಯವರನ್ನು ಅಧ್ಯಕ್ಷ ದಿಸಾನಾಯಕೆ ನೇಮಕಗೊಳಿಸಿದರು. ಒಟ್ಟು ನಾಲ್ಕು ಮಂದಿಯನ್ನು ಸಚಿವರನ್ನಾಗಿಯೂ ನೇಮಕ ಮಾಡಿದರು. ಹರಿಣಿಯವರಿಗೆ ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಖಾತೆಗಳನ್ನು ನೀಡಲಾಗಿದೆ