Home » ಸಿ ಎಂ ವಿರುದ್ಧ ತನಿಖೆಗೆ ಅನುಮತಿ
 

ಸಿ ಎಂ ವಿರುದ್ಧ ತನಿಖೆಗೆ ಅನುಮತಿ

ಮೂಡಾ ಹಗರಣ

by Kundapur Xpress
Spread the love

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಷನ್ ತನಿಖೆಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ನೀಡಿದ್ದ ಆದೇಶ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಮಂಗಳವಾರ ಮಧ್ಯಾಹ್ನ 12.00 ಗಂಟೆಗೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು 197 ಪುಟಗಳ ಆದೇಶ ಪ್ರಕಟಿಸಿ, ರಾಜ್ಯಪಾಲರ ಆದೇಶವು ವಿವೇಚನಾ ರಹಿತವಾಗಿರದೇ ಕಾನೂನಿನ ಪ್ರಕಾರದಲ್ಲಿದೆ. ರಾಜ್ಯಪಾಲರು ತನಿಖಾಧಿಕಾರಿಯಿಂದ ಮುಂಚಿತವಾಗಿ ತನಿಖೆ ನಡೆಸಿ ವರದಿ ಪಡೆಯಬೇಕಾದ ಅಗತ್ಯವಿಲ್ಲ, ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್ 17ಎ ಅಡಿ ಖಾಸಗಿ ವ್ಯಕ್ತಿಯೂ ಸಹ ತನಿಖೆಗೆ ಕೋರಿ ಅನುಮತಿ ಪಡೆಯಬಹುದು ಎಂದು ಹೇಳಿದೆ.ಪೀಠವು ತನ್ನ ಆದೇಶದಲ್ಲಿ ದೂರುದಾರರು ದೂರನ್ನು ಮುಂದುವರಿಸಲು, ರಾಜ್ಯಪಾಲರಿಂದ ಅನುಮೋದನೆ ಪಡೆಯಲು ಸಮರ್ಥರಾಗಿದ್ದಾರೆ. ಸಾಮಾನ್ಯ ಸಂದರ್ಭ ಗಳಲ್ಲಿ ಸಚಿವ ಸಂಪುಟದ ಸಲಹೆಯಂತೆ ಕಾರ್ಯ ನಿರ್ವಹಿಸುವುದು ರಾಜ್ಯಪಾಲರ ಕರ್ತವ್ಯ. ಆದರೂ ವಿಶೇಷ ಸಂದರ್ಭದಲ್ಲಿ ಸ್ವತಂತ್ರ ನಿರ್ಧಾರವನ್ನು ತೆಗೆದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದೆ. ಆದರೆ, ಪೊಲೀಸ್ ಅಧಿಕಾರಿಯೇ ಅನುಮತಿಯನ್ನು ಕೋರಬೇಕು ಎನ್ನುವ ಅಗತ್ಯವೇನೂ ಇಲ್ಲ. ಖಾಸಗಿ ದೂರುದಾರರೂ ಅನುಮತಿ ಕೋರಬಹುದು ಎಂದು ದೃಢವಾಗಿ ಹೇಳಿದೆ.

   

Related Articles

error: Content is protected !!