Home » ನಟ ರಜನಿ ಹೊಟ್ಟೆಗೆ ಸ್ಟಂಟ್ ಅಳವಡಿಕೆ
 

ನಟ ರಜನಿ ಹೊಟ್ಟೆಗೆ ಸ್ಟಂಟ್ ಅಳವಡಿಕೆ

ಹೊಟ್ಟೆ ನೋವು

by Kundapur Xpress
Spread the love

ಚೆನ್ನೈ : ಖ್ಯಾತ ನಟ ರಜನೀಕಾಂತ್ ಸೋಮವಾರ ರಾತ್ರಿ ಹೊಟ್ಟೆ ನೋವಿನ ಹಿನ್ನೆಲೆಯಲ್ಲಿ ದಿಢೀ‌ರ್ ಅಸ್ವಸ್ಥರಾಗಿದ್ದು, ಅವರನ್ನು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲುಮಾಡಲಾಗಿದೆ. ವೈದ್ಯರು ಕೆಳಹೊಟ್ಟೆಯ ಭಾಗದಲ್ಲಿ ಅವರಿಗೆ ಸ್ಟಂಟ್ ಅಳವಡಿಕೆ ಮಾಡಿದ್ದಾರೆ. ಸದ್ಯ ರಜನೀಕಾಂತ್ ಅವರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ನಿಗಾದಲ್ಲಿ ಇಡಲಾಗಿದೆ.

ಮುಂದಿನ 2-3 ದಿನಗಳ ಕಾಲ ಆಸ್ಪತ್ರೆಯಲ್ಲೇ ಚೇತರಿಸಿಕೊಳ್ಳಲಿದ್ದು,ಬಳಿಕ ಡಿಸ್ಟಾರ್ಜ್ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 73 ವರ್ಷದ ರಜನೀಕಾಂತ್ ಅವರು ದಿಢೀರ್ ಆಸ್ಪತ್ರೆಗೆ ದಾಖಲಾದ ಸುದ್ದಿ ಸಹಜವಾಗಿಯೇ ಅವರ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ, ರಜನಿ ಅವರ ಪತ್ನಿ – ಲತಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಏನೂ ಸಮಸ್ಯೆ ಇಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ಈ ನಡುವೆ ರಜನಿ ಅವರು ಬೇಗನೆ ಚೇತರಿಸಿಕೊಳ್ಳಲಿ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಟ್ವಿಟ್ ಮಾಡಿದ್ದಾರೆ.

   

Related Articles

error: Content is protected !!