ಸರ್ವ ಮಂಗಲ ಮಾಂಗಲ್ಯೇ
ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಿಕೇ ದೇವಿ
ನಾರಾಯಣಿ ನಮೋಸ್ತುತೆ
ನವರಾತ್ರಿಯ ಈ ಶುಭ ಸಂದರ್ಭದಲ್ಲಿ ನಮ್ಮಲ್ಲಿ ಶಕ್ತಿ ಸಮೃದ್ಧಿ ಚೈತನ್ಯ ಹಾಗೂ ಜ್ಞಾನವನ್ನು ತುಂಬಿಸುವ ಶಕ್ತಿ ದೇವತೆಯಾದ ಕಾಳಿಕಾದೇವಿ ಲಕ್ಷ್ಮೀದೇವಿ ಹಾಗೂ ಸರಸ್ವತಿ ದೇವಿಯನ್ನು ನಾವು ಆರಾಧಿಸುವುದು ಶಾಸ್ತ್ರ ಸಮ್ಮತವಾಗಿದೆ
ಕಾಳಿಕಾದೇವಿಯು ನಮ್ಮೊಳಗಿನ ಕಾಮನೆಗಳೆಂಬ ಶತ್ರುವನ್ನು ಸಂಹರಿಸುವವಳಾದರೇ ಲಕ್ಷ್ಮಿದೇವಿಯು ನಮ್ಮ ಮನೆ-ಮನಗಳಲ್ಲಿ ಸಮೃದ್ಧಿಯನ್ನು ಉಂಟುಮಾಡುತ್ತಾಳೆ ಸರಸ್ವತಿ ದೇವಿಯು ನಮಗೆ ಅತೀ ಅಗತ್ಯವಾದ ಜ್ಞಾನ ಚಕ್ಷುವನ್ನು ನೀಡುತ್ತಾಳೆ ಆಕೆ ವಿದ್ಯಾದಾಯಿನಿಯೂ ಹೌದು ಜ್ಞಾನದ ಶಕ್ತಿ ಇಲ್ಲದಿದ್ದರೆ ನಾವು ಅಂಧಕಾರದಲ್ಲಿ ಕೊಳೆಯಬೇಕಾಗುತ್ತದೆ ನಮ್ಮ ಬದುಕು ಸುಂದರವು ಸಂತಸದಾಯಕವೂ ಆಗಿರಬೇಕಾದರೆ ನಾವು ಜ್ಞಾನವೇತ್ತರರಾಗಬೇಕು
ನಿಜವಾದ ಜ್ಞಾನವೆಂದರೆ ಆಧ್ಯಾತ್ಮಿಕ ಜ್ಞಾನ ಆ ಜ್ಞಾನವನ್ನು ನಮಗೆ ಕರುಣಿಸುವವಳು ಶಾರದೆ ಆಕೆ ಶಕ್ತಿ ದೇವತೆ ಆದುದರಿಂದಲೇ ನವರಾತ್ರಿ 9 ದಿನಗಳಲ್ಲಿ ಶ್ರೀದೇವಿಯನ್ನು9 ರೂಪಗಳಲ್ಲಿ ಆರಾಧಿಸುತ್ತಾ ನಮ್ಮಲ್ಲಿನ ತಾಮಸಿಕ ರಾಜಸಿಕ ಗುಣಗಳನ್ನು ನಿವಾರಿಸಿ ಸಾತ್ವಿಕತೆಯನ್ನು ಮೈದುಂಬಿಸುವ ಮೂಲಕ ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ಪ್ರಯತ್ನಿಸುತ್ತೇವೆ ಹಾಗೆಯೇ ಆ ಮೂಲಕ ಬದುಕನ್ನು ಶಾಂತ ಸುಂದರ ಹಾಗೂ ತಪ್ತಿಕರವಾಗಿ ರೂಪಿಸಿಕೊಳ್ಳಲು ಮುಂದಾಗುತ್ತೇವೆ
ಶಕ್ತಿ ದೇವತೆಯಿಂದ ವಿಶೇಷವಾಗಿ ಅನುಗ್ರಹಿತರಾಗಿರುವವಳು ಮಹಿಳೆ ಅರ್ಥ ಮಹಿಮೆಯಿಂದ ಕೂಡಿದವಳು, ಗೌರವ ಶಾಲಿನಿ ಸದ್ಭಾವನೆ ತುಂಬಿದ ಮಹಿಳೆ ಮನೆ ಸಮಾಜ ಸಂಘಟನೆಗಳಲ್ಲಿ ಶಕ್ತಿ ತುಂಬುವ ಸ್ಪೂರ್ತಿದಾತೆಯಾಗಿದ್ದಾಳೆ ನುಡಿದಂತೆ ನಡೆಯಬಲ್ಲ ಹಾಗೆಯೇ ಸಾಧಿಸಿ ತೋರಬಲ್ಲ ಸ್ಥಿರವಾದ ದೃಢವಾದ ಮನೋಭಾವನೆ ಮಹಿಳೆಯರಲ್ಲಿದೆ ಅವಳಲ್ಲಿ ಇರುವ ಶಕ್ತಿ ಪ್ರತಿಭೆ ಸಮಾಜ ಸೇವೆಗೆ ಮೀಸಲಾಗಿರಿಸಬೇಕೆಂಬ ಉದ್ದೇಶದಿಂದ ರಾಮಕ್ಷತ್ರಿಯ ಮಹಿಳಾ ಮಂಡಳಿಯು 1979ರಲ್ಲಿ ಜನ್ಮ ತಾಳಿತು
ಶ್ರೀಮತಿ ವತ್ಸಲಾ ಗೋಪಾಲ್ ರಾವ್
ಸ್ಥಾಪಕ ಅಧ್ಯಕ್ಷರು
1979 ಇದು ರಾಮಕ್ಷತ್ರಿಯ ಸಮಾಜದ ಮಹಿಳೆಯರಲ್ಲಿ ಹೊಸ ಚೈತನ್ಯ ಉತ್ಸಾಹ ತಂದಂತಹ ವರ್ಷ ಸಮಾಜದ ಮಹಿಳೆಯರಲ್ಲಿ ದೈವಿ ಭಕ್ತಿಯನ್ನು ಜಾಗೃತಗೊಳಿಸಿ ಧಾರ್ಮಿಕ ಜೀವನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕೆಂಬ ಹೊಂಗನಸಿನಿಂದ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಸ್ಥಾಪನೆ ಆಯಿತು
ಸರೋಜ ಅರುಣ್ ಕುಮಾರ್ ಎಸ್ ವಿ
ಅಧ್ಯಕ್ಷರು
ಶ್ರೀಮತಿ ಬಿಂದಿಯಾ ಅಶೋಕ್ ಬೆಟ್ಟಿನ್
ಕಾರ್ಯದರ್ಶಿ
ಶ್ರೀಮತಿ ದೇವಕಿ ಸಣ್ಣಯ್ಯ
ಕೋಶಾಧಿಕಾರಿ
ಅದರಂತೆ ನವರಾತ್ರಿಯ ಮೂಲ ನಕ್ಷತ್ರದಂದು ಶ್ರೀದೇವಿಯ ಮೂರ್ತಿಯನ್ನು ವಾದ್ಯ ಮೇಳಗಳೊಂದಿಗೆ ಮೆರವಣಿಗೆಯ ಮೂಲಕ ತಂದು ಸೀತಾರಾಮಚಂದ್ರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿ ದುರ್ಗಾ ಹೋಮ ಸಪ್ತಶತಿ ಪಾರಾಯಣ ಪೂಜೆ ಭಜನೆ ಹೀಗೆ ಎಲ್ಲಾ ರೀತಿಯ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಾಲ್ಕು ದಿನಗಳ ಪೂಜೆ ಶಾಸ್ತ್ರೋಕ್ತವಾಗಿ ಇಂದಿಗೂ ನಡೆದುಕೊಂಡು ಬರುತ್ತಿದೆ
ಶ್ರೀಮತಿ ವಿದ್ಯಾಲಕ್ಷ್ಮೀ ವಿಶ್ವನಾಥ
ಗೌರವಾಧ್ಯಕ್ಷರು
ಸೂಕ್ತ ಪ್ರತಿಭೆಗೆ ಪ್ರೋತ್ಸಾಹ
ರಾಮಕ್ಷತ್ರಿಯ ಸಮಾಜದ ಮಕ್ಕಳ ಮತ್ತು ಮಹಿಳೆಯರ ಸೂಕ್ತ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಸಲುವಾಗಿ ಪ್ರತಿದಿನ ಸಂಜೆ ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಹಾಗೆಯೇ ವಿವಿಧ ರೀತಿಯ ಸ್ಪರ್ಧೆಗಳನ್ನು ಆಟೋಟ ಸಂಗೀತ ಭಾಷಣ ರಂಗವಲ್ಲಿ ಹೂ ಕಟ್ಟುವುದು ಛದ್ಮವೇಶಗಳನ್ನು ಏರ್ಪಡಿಸಲಾಗುತ್ತದೆ ಧರ್ಮ ಸಂಸ್ಕೃತಿ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಕ್ಕಾಗಿ ಸಂಜೆಯ ಸಭಾ ಕಾರ್ಯಕ್ರಮವನ್ನು ಏರ್ಪಡಿಸಿ ಪೂರ ಪರ ಊರ ಜ್ಞಾನವಂತ ಮಹಿಳೆಯರನ್ನು ಕರೆಸಲಾಗುತ್ತದೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸುವುದು ಇಂದಿಗೂ ರೂಢಿಯಾಗಿದೆ
ವಿಜಯದಶಮಿಯಂದು ವಿಜೃಂಭಣೆಯ ಮೆರವಣಿಗೆಯೊಂದಿಗೆ ಶ್ರೀ ಶಾರದಾದೇವಿ ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವುದರೊಂದಿಗೆ ನವರಾತ್ರಿ ಶಾರದೋತ್ಸವ ಮುಕ್ತಾಯಗೊಳ್ಳುತ್ತದೆ
ಇವಕ್ಕೆಲ್ಲ ನಮ್ಮ ಕುಂದಾಪುರದ ರಾಮ ಕ್ಷತ್ರಿಯರ ಸಂಘ ಮತ್ತು ರಾಮಕ್ಷತ್ರಿಯ ಯುವಕ ಮಂಡಳಿಯ ಸರ್ವ ಸದಸ್ಯರ ಹಾಗೂ ಊರ-ಪರಊರ ಬಾಂಧವರ ಸಂಪೂರ್ಣ ಸಹಕಾರ ಸಿಗುತ್ತದೆ ಎಂದು ಈ ವರ್ಷದ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಅಧ್ಯಕ್ಷರಾದ ಸರೋಜಾ ಅರುಣ್ ಕುಮಾರ್ ಎಸ್ ವಿ ತಿಳಿಸಿದ್ದಾರೆ
1979 ರ ಆಮಂತ್ರಣ ಪತ್ರಿಕೆ
1979ರಲ್ಲಿ ಸ್ಥಾಪನೆಗೊಂಡ ರಾಮಕ್ಷತ್ರಿಯ ಮಹಿಳಾ ಮಂಡಳಿಯ ಪ್ರಥಮ ವರ್ಷದ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆಯು ಕುಂದೇಶ್ವರ ದೇವಸ್ಥಾನದ ಮಾಜಿ ಮೊಕ್ತೇಸರರಾದ ಕೆ ಆರ್ ಉಮೇಶ್ ರಾವ್ ರವರ ಸಂಗ್ರಹದಲ್ಲಿ ದೊರೆತಿದ್ದು
- ಕೆ ಗಣೇಶ್ ಹೆಗ್ಡೆ,ಕುಂದಾಪುರ