ಕೋಟ : ಇಲ್ಲಿನ ಸಾಸ್ತಾನದ ಸಮೀಪದ ಪಾಂಡೇಶ್ವರ ಮೂಡಹಡುವಿನ ಕಳಿಬೈಲು ಶ್ರೀಕ್ಷೇತ್ರ ತುಳಸಿ ಅಮ್ಮ,ಶಿರಸಿಮಾರಿಕಾಂಬಾ ಹಾಗೂ ಕೊರಗಜ್ಜ ಪರಿವಾರ ದೇಗುಲದಲ್ಲಿ ಅ.3ರಿಂದ ಆರಂಭಗೊಂಡ ಶರನ್ನವರಾತ್ರಿ ಉತ್ಸವ ಅ.13ರ ವಿಜಯದಶಮಿಯಂದು ಸಂಪನ್ನಗೊಳ್ಳಲಿದೆ.ಈ ಹಿನ್ನಲ್ಲೆಯಲ್ಲಿ ಬುಧವಾರ ನಡೆದ ಸಾಂಸ್ಕತಿಕ ಕಾರ್ಯಕ್ರಮವನ್ನು ಉಪನ್ಯಾಸಕ ಕೃಷ್ಣ ಸಾಸ್ತಾನ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಗುಲದ ಮುಕ್ತೇಸರ ಎಂ.ಸಿ ಚಂದ್ರಶೇಖರ್ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಹಂಗಾರಕಟ್ಟೆ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮನೋಜ್ ಕುಮಾರ್,ಸಾಸ್ತಾನ ಗೋಳಿಗರಡಿ ಬ್ರಹ್ಮಬೈದರ್ಕಳ ಭಜನಾ ಮಂಡಳಿಯ ಮುಖ್ಯಸ್ಥೆ ಕುಸುಮಾ ಮನೋಜ್,ಪತ್ರಕರ್ತ ರವೀಂದ್ರ ಕೋಟ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದೇಗುಲದ ಪ್ರಧಾನ ಅರ್ಚಕ ಅಭಿಜಿತ್ ಪಾಂಡೇಶ್ವರ ಸ್ವಾಗತಿಸಿ ನಿರೂಪಿಸಿ ವಂದಿಸಿದರು. ನಂತರ ಸಾಸ್ತಾನ ಗೋಳಿಗರಡಿ ಬ್ರಹ್ಮಬೈದರ್ಕಳ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಸಂಪನ್ನಗೊಂಡಿತು.