Home » ಭಾರತ ಸರಕಾರದ ಪರ ಸಚಿವ ಅಮಿತ್‌ ಶಾ ಗೌರವ
 

ಭಾರತ ಸರಕಾರದ ಪರ ಸಚಿವ ಅಮಿತ್‌ ಶಾ ಗೌರವ

by Kundapur Xpress
Spread the love

ಮುಂಬೈ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತ ಸರ್ಕಾರದ ಪರವಾಗಿ ಉದ್ಯಮಿ ರತನ್ ಟಾಟಾ ಅವರ ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದರು.

ಗುರುವಾರ ಮಧ್ಯಾಹ್ನ ಮುಂಬೈಗೆ ಆಗಮಿಸಿದ ಅವರು ಕಲಾ ರಾಷ್ಟ್ರೀಯ ಕೇಂದ್ರ (ಎನ್‌ಸಿಪಿಎ) ಆವರಣಕ್ಕೆ ಬಂದು ಅಲ್ಲಿ ಇಡಲಾಗಿದ್ದ ಟಾಟಾ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛ ಅರ್ಪಿಸಿದರು. ಈ ವೇಳೆ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಾಥ್ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಆಸಿಯಾನ್ ಶೃಂಗಕ್ಕಾಗಿ ಲಾವೋಸ್‌ಗೆ ತೆರಳಿರುವ ಕಾರಣ ಅವರಿಗೆ ಅಂತ್ಯ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಹೀಗಾಗಿ ಶಾ ಭಾರತ ಸರ್ಕಾರದ ಪರ ನಮನ ಸಲ್ಲಿಸಿದರು.

   

Related Articles

error: Content is protected !!