Home » ತುಳಸಿ ಗಿಡ ನೆಡುವ ಅಭಿಯಾನ
 

ತುಳಸಿ ಗಿಡ ನೆಡುವ ಅಭಿಯಾನ

by Kundapur Xpress
Spread the love

ಕೋಟ: ಪಂಚವರ್ಣ ಸಂಸ್ಥೆಯ ಕ್ರೀಯಾಶೀಲತೆ ಆ ಸಂಸ್ಥೆ ಇನ್ನಷ್ಟು ಸೇವಾ ಕಾರ್ಯಕ್ಕೆ ಸಾಕ್ಷಿಯಾಗಿದೆ ಅಲ್ಲದೆ ಊರಿಗೆ ಮಾದರಿ ಎಂದೆನಿಸಿದೆ ಎಂದು ಕೋಟದ ಸಾಮಾಜಿಕ ಕಾರ್ಯಕರ್ತ ಕೋಟ ಶ್ರೀಕಾಂತ್ ಶೆಣೈ ಹೇಳಿದರು.
ಕೋಟದ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯ ಸಮೀಪದಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ಕೋಟ ಇವರ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ,ವಿಪ್ರ ಮಹಿಳಾ ಬಳಗ ಕೋಟ,ಸಕಡ್ ಫೌಂಡೇಶನ್ ಕೋಟ ಇವರುಗಳ ಸಹಯೋಗದೊಂದಿಗೆ 228ನೇ ಭಾನುವಾರ ಪರಿಸರಸ್ನೇಹಿ ಅಭಿಯಾನ ತುಳಸಿ ಗಿಡ ನಡುವ ಕಾರ್ಯಕ್ರಮ ಜರುಗಿತು

ತುಳಸಿ ಆರಾಧನೆ ಶೀರ್ಷಿಕೆಯಡಿ ಕಾರ್ಯಕ್ರಮದಲ್ಲಿ ಮಾತನಾಡಿ ಸಮಾಜದಲ್ಲಿಸಂಘಟನೆಗಳು ನಿತ್ಯ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳು ನೀಡಿದಾಗ ಸಮಾಜದಲ್ಲಿ ಬದಲಾವಣೆಗಳನ್ನು ಕಾಣಲು ಸಾಧ್ಯ ಈ ದಿಸೆಯಲ್ಲಿ ರಾಷ್ಟಿçÃಯ ಹೆದ್ದಾರಿಯಲ್ಲಿ ತ್ಯಾಜ್ಯ ಮುಕ್ತಗೊಳಿಸಲು ತುಳಸಿ ಗಿಡ ನಡುವ ಅಭಿಯಾನ ಸಹಕಾರಿ ಎಂದರು.
ರಾಷ್ಟಿçÃಯ ಹೆದ್ದಾರಿ ನಿರ್ವಹಣೆಗೈಯುತ್ತಿರುವ ಕಂಪನಿ ಹೆದ್ದಾರಿ ಆಸುಪಾಸು ಸ್ಚಚ್ಛಗೊಳಿಸಿದ್ದು ಕೋಟದ ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ ಸಹಕಾರ ನೀಡಿದರು.
ಈ ಸಂದರ್ಭದಲ್ಲಿ ಯುವ ಕೃಷಿಕ ದಿನೇಶ್ ಪೂಜಾರಿ ಹರ್ತಟ್ಟು, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

   

Related Articles

error: Content is protected !!