ಕುಂದಾಪುರ : ಕೋಟೇಶ್ವರದ ಸಮೀಪದ ಬೀಜಾಡಿಯ ಅಮಾವಾಸ್ಯೆ ಕಡು ಎಂಬಲ್ಲಿ ಸಮುದ್ರದಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲಾದ ಘಟನೆ ಇಂದು ಸಂಭವಿಸಿದೆ.
ಸಮುದ್ರದ ಅಲೆಗೆ ಕೊಚ್ಚಿ ಹೋದ ದುರ್ದೈವಿ ಯುವಕರಾದ ಸಂತೋಷ (23ವರ್ಷ) ಹಾಗೂ ಅಜೇಯ(22ವರ್ಷ) ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಸಂತೋಷ್ ನ ಮೃತದೇಹ ಇನ್ನೋರ್ವ ಅಜೇಯ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದ್ದು ನಗರದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ
ಮದುವೆ ಕಾರ್ಯಕ್ರಮಕ್ಕೆಂದು ಇಬ್ಬರು ಬೆಂಗಳೂರಿನಿಂದ ಕುಂದಾಪುರಕ್ಕೆ ಬಂದಿದ್ದು ಬೀಜಾಡಿ ಬೀಚ್ ಪಕ್ಕದ ರೆಸಾರ್ಟ್ ವೊಂದರಲ್ಲಿ ಉಳಿದುಕೊಂಡಿದ್ದರು ಎನ್ನಲಾಗಿದೆ.
ಇಂದು ಬೆಳಿಗ್ಗೆ ಸ್ನೇಹಿತರೊಂದಿಗೆ ಸಮುದ್ರದಲ್ಲಿ ಈಜಲು ತೆರಳಿದ ವೇಳೆ ಇಬ್ಬರು ಸಮುದ್ರದ ಅಲೆಗೆ ಸಿಲುಕಿ ಇಬ್ಬರು ನೀರು ಪಾಲಾಗಿದ್ದಾರೆ.
ಮಾಹಿತಿ ತಿಳಿದ ತಕ್ಷಣ ಸ್ಥಳೀಯರು ಸಂತೋಷ್ ನನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿರುತ್ತಾರೆ. ಇನ್ನೋರ್ವ ಮೂಲತ ಕುಂದಾಪುರದ ಆನಗಳ್ಳಿ ನಿವಾಸಿ ಅಜೇಯ್ ಮೃತದೇಹವು ಪತ್ತೆಯಾಗಿದೆ ಕುಂದಾಪುರ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ