ಒಟ್ಟಾವಾ : ಕೆನಡಾದ ಹಿಂದೂ ದೇವಾಲಯವೊಂದರ ಮೇಲೆ ಖಲಿಸ್ತಾನಿಗಳು ನಡೆಸಿದ ದಾಳಿ ಖಂಡಿಸಿ ಕೆನಡಾದ ಹಿಂದೂ ಸಮುದಾಯದ ಸಾವಿರಕ್ಕೂ ಹೆಚ್ಚು ಸದಸ್ಯರು ಮಂಗಳವಾರ ಬ್ರಾಂಪ್ಟನ್ನಲ್ಲಿ ಪ್ರತಿಭಟನೆ ನಡೆಸಿ, ದೇಶದಲ್ಲಿ ಹಿಂದೂಗಳ ವಿರುದ್ಧ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಕೆನಡಾದ ಅತಿ ದೊಡ್ಡ ದೇವಾಲಯಗಳಲ್ಲಿ ಒಂದಾದ ಹಿಂದೂ ಸಭಾ ಮಂದಿರದ ಹೊರಗೆ ಈ ಪ್ರತಿಭಟನೆ ನಡೆಯಿತು. ಒಂಟಾರಿಯೊದ ಎಲ್ಲ ಹಿಂದೂಗಳು ಶಾಂತಿಯುತ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಹಿಂದೂ ವಲಸಿಗರನ್ನು ಒಗ್ಗಟ್ಟಿನಿಂದ ನಿಲ್ಲಲು, ಹೆಚ್ಚುತ್ತಿರುವ ಉದ್ದೇಶಿತ ಹಿಂಸಾಚಾರದ ಘಟನೆಗಳ ಕುರಿತು ತನಿಖೆಗೆ ಕೆನಡಾ ಸರ್ಕಾರವನ್ನು ಒತ್ತಾಯಿಸಲು ಈ ಪ್ರತಿಭಟನೆ ನಡೆಯಿತು