Home » 3ನೇ ದಿನವೂ ಮಾರಾಮಾರಿ
 

3ನೇ ದಿನವೂ ಮಾರಾಮಾರಿ

ಕಾಶ್ಮೀರ ವಿಧಾನಸಭೆ

by Kundapur Xpress
Spread the love

ಶ್ರೀನಗರ : ಕಣಿವೆ ರಾಜ್ಯ ಜಮ್ಮು – ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿಯ ಮರು ಜಾರಿ ಕುರಿತು ವಿಧಾನಸಭೆಯಲ್ಲಿ ನಡೆಯುತ್ತಿರುವ ಗದ್ದಲ 3ನೇ ದಿನಕ್ಕೆ ಕಾಲಿಟ್ಟಿದೆ. 370ನೇ ವಿಧಿ ಮರುಜಾರಿ ಬೆಂಬಲಿಸಿ ಪಿಡಿಪಿ ಪಕ್ಷದ ಶಾಸಕ ಮೊಹಮ್ಮದ್ ಫಯಾಜ್, ಶುಕ್ರವಾರದ ಕಲಾಪದ ವೇಳೆ ಬ್ಯಾನರ್ ಪ್ರದರ್ಶಿಸಿದರು. ಈ ವೇಳೆ ಬಿಜೆಪಿ ‘ಭಾರತ್ ಮಾತಾ ಕಿ ಕೈ’ ಘೋಷಣೆ ಕೂಗಿ ಪ್ರತಿಭಟಿಸುವುದರ ಜೊತೆಗೆ ಬ್ಯಾನ‌ರ್ ಕಸಿದುಕೊಳ್ಳಲು ಯತ್ನಿಸಿತು. ಈ ವೇಳೆ ಕಳೆದೆರಡು ದಿನದಂತೆ ಕೈಕೈ ಮಿಲಾಯಿಸುವುದು, ಬಿಜೆಪಿ ಶಾಸಕರು ಸದನದ ಬಾವಿಗಿಳಿವುದು, ತಳ್ಳಾಟದ ಘಟನೆ ಮರುಕಳಿಸಿವೆ. 

   

Related Articles

error: Content is protected !!