ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೊನಾಲ್ಡ್ ಟ್ರಂಪ್ ಹತ್ಯೆಗೆ ರೂಪಿಸಿದ್ದ ಸಂಚನ್ನು ವಿಫಲಗೊಳಿಸಿ ರುವ ಎಫ್‌ಬಿಐ, ಒಬ್ಬ ಇರಾನಿ ಪ್ರಜೆ ಮತ್ತು ಇಬ್ಬರು ಅಮೆರಿಕ ಪ್ರಜೆಗಳನ್ನು ಬಂಧಿಸಿದೆ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
ಇರಾನ್ ಪ್ರಜೆ ಎನ್ನಲಾಗಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ (ಐಆರ್‌ಜಿಸಿ) ಆಸ್ತಿ ಫರ್ಹಾದ್ ಶಾಕರಿ (51) ಸಂಚಿನ ಮಾಸ್ಟರ್ ಮೈಂಡ್ ಎನ್ನಲಾಗಿದೆ. 49 ವರ್ಷದ ಕಾರ್ಲಿಸ್ಥೆ ರಿವೆರಾ ಮತ್ತು 36 ವರ್ಷದ ಜೊನಾಥನ್ ಲೋಡೋಲ್ಡ್‌ರನ್ನು ನ್ಯೂಯಾರ್ಕ್ ಬ್ರೂಕ್ಲಿನ್ ಮತ್ತು ಸ್ಟೇಟನ್ ದ್ವೀಪದಿಂದ ಬಂಧಿಸಲಾಗಿದೆ. ಶಕೀರಿ ಹೇಳಿಕೆ ಗಳ ಪ್ರಕಾರ, ಇರಾನಿನ ಆಡಳಿತ ಟ್ರಂಪ್‌ರನ್ನು ಕೊಲ್ಲುವ ಯೋಜನೆ ರೂಪಿಸುವ ಕಾರ್ಯವನ್ನು ಅವರಿಗೆ ವಹಿಸಿತ್ತು. ನ್ಯೂಯಾರ್ಕ್ ನಗರದಲ್ಲಿ ಇಬ್ಬರು ಯಹೂದಿ ಅಮೆರಿಕನ್ ನಾಗರಿಕರ ಮೇಲೆ ಕಣ್ಣಾವಲು ಇಡಲು ಸೂಚನೆ ನೀಡಲಾಗಿತ್ತು. ಅವರಲ್ಲಿ ಯಾರನ್ನಾದರೂ ಒಬ್ಬರನ್ನು ಕೊಲ್ಲಲು ಐಆರ್‌ಜಿಸಿ 500,000 ಡಾಲರ್ ನೀಡುವುದಾಗಿ ಹೇಳಿತ್ತು ಎಂದು ತಿಳಿಸಿದ್ದಾನೆ.