ಜಾರ್ಜ್ಟ್ರನ್ (ಗಯಾನಾ) : ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗಯಾನಾ, ಡೊಮಿನಿಕಾ ಹಾಗೂ ಬಾರ್ಬಡೋಸ್ ರಾಷ್ಟ್ರಗಳು ತಮ್ಮ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ
ಕೊರೋನಾ ಸಮಯದಲ್ಲಿ ಲಸಿಕೆ ಪೂರೈಸಿ ನೆರವಾಗಿದ್ದ ಕಾರಣ ದಕ್ಷಿಣ ಅಮೆರಿಕಾದ ಗಯಾನಾ ಹಾಗೂ ಕೆರೆಬಿಯನ್ ದೇಶವಾದ ಡೊಮಿನಿಕಾ ಈ ಗೌರವ ಘೋಷಿಸಿವೆ. ಗಯಾನಾದ ‘ದಿ ಆರ್ಡರ್ ಆಫ್ ಎಕ್ಸಲೆನ್ಸ್’, ಡೊಮಿನಿಕಾದ ‘ಅವಾರ್ಡ್ ಆಫ್ ಆನರ್’ ಹಾಗೂ ಬಾರ್ಬಡೋಸ್ನ ಅತ್ಯುಚ್ಚ ಪ್ರಶಸ್ತಿಯಾದ ‘ಆನರಿ ಆರ್ಡರ್ ಆಫ್ ಫ್ರೀಡಂ ಆಫ್ ಬಾರ್ಬಡೋಸ್’ ಮೋದಿಯವರಿಗೆ ಲಭಿಸಿವೆ.