Home » ಉಪಚುನಾವಣೆ : ಕಾಂಗ್ರೇಸ್‌ ಭರ್ಜರಿ ಬೇಟೆ
 

ಉಪಚುನಾವಣೆ : ಕಾಂಗ್ರೇಸ್‌ ಭರ್ಜರಿ ಬೇಟೆ

ಕಾಂಗ್ರೆಸ್‌ ತ್ರಿವಿಕ್ರಮ

by Kundapur Xpress
Spread the love

ಬೆಂಗಳೂರು : ಕಳೆದ ಆರು ತಿಂಗಳಿಂದ ಮುಡಾ ಅಕ್ರಮ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ, ವಕ್ಪ್ ವಿವಾದ ಸೇರಿದಂತೆ ಸಾಲು ಸಾಲು ಆರೋಪ, ವಿವಾದಗಳ ನಡುವೆಯೂ ತೀವ್ರ ಜಿದ್ದಾಜಿದ್ದಿನ ಕಣವಾಗಿದ್ದ ಮೂರು ವಿಧಾನಸಭಾ ಕ್ಷೇತ್ರಗಳ ಉಪಸಮರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಬಾರಿಸಿದೆ.

ತಮ್ಮ ಹಿಡಿತದಲ್ಲಿದ್ದ ಸಂಡೂರು ಕ್ಷೇತ್ರವನ್ನು ಉಳಿಸಿಕೊಳ್ಳುವುದರ ಜತೆಗೆ ಜೆಡಿಎಸ್ ಭದ್ರಕೋಟೆಯಾದ ಚನ್ನಪಟ್ಟಣ ಮತ್ತು ಬಿಜೆಪಿ ಕಪಿಮುಷ್ಠಿಯಲ್ಲಿದ್ದ ಶಿಗ್ಗಾಂವಿ ಕ್ಷೇತ್ರವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್ ಬಾವುಟ ಹಾರಿಸಿದೆ. ಉಪಚುನಾವಣೆಯಲ್ಲಿ ಕನಿಷ್ಠ ಎರಡು ಕ್ಷೇತ್ರಗಳನ್ನಾದರೂ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದ ಎನ್‌ಡಿಎಗೆ ಭಾರೀ ನಿರಾಶೆಯಾಗಿದೆ.

ಸಂಡೂರಿನಲ್ಲಿ ಇ.ಅನ್ನಪೂರ್ಣ, ಶಿಗ್ಗಾಂವಿಯಲ್ಲಿ ಯಾಸೀರ್ ಅಹ್ಮದ್ ಖಾನ್ ‘ಪಠಾಣ್ ಹಾಗೂ ಚನ್ನಪಟ್ಟಣದಲ್ಲಿ ಸಿ.ಪಿ. ಯೋಗೇಶ್ವ‌ರ್ ಅವರು ಜಯಭೇರಿ ಬಾರಿಸಿದ್ದಾರೆ. 3 ಕ್ಷೇತ್ರಗಳ ಪೈಕಿ ತೀವ್ರ ಕುತೂಹಲ ಮೂಡಿಸಿದ್ದ ಮತ್ತು ಜೆಡಿಎಸ್ ಪ್ರಭಾವ ಇರುವ ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್, ಅಭ್ಯರ್ಥಿ ಯೋಗೇಶ್ವರ್ ವಿರುದ್ಧ ಭಾರೀ ಅಂತದಲ್ಲಿ ಸೋಲನುಭವಿಸಿದ್ದಾರೆ. 25 ಸಾವಿರಕ್ಕೂ ಹೆಚ್ಚಿನ ಮತಗಳ ಅಂತದಲ್ಲಿ ಯೋಗೇಶ್ವರ್ ವಿಜಯ ಪತಾಕೆ ಹಾರಿಸಿದ್ದಾರೆ.

ಮತ ಎಣಿಕೆ ಆರಂಭವಾದಾಗ ಮುನ್ನಡೆ ಕಾಯ್ದುಕೊಂಡಿದ್ದ ನಿಖಿಲ್ ಕುಮಾರಸ್ವಾಮಿ 6 ಸುತ್ತಿನವರೆಗೆ ಮುಂದಿದ್ದರು. ನಂತರದ ಸುತ್ತಿನ ಮತ ಎಣಿಕೆ ಬಳಿಕ ಮುನ್ನಡೆಗೆ ಬಂದ ಯೋಗೇಶ್ವ‌ರ್ ಅಂತಿಮ ಸುತ್ತಿನವರೆಗೆ ಪ್ರತಿ ಸುತ್ತಿಗೂ ಅಂತರ ಹೆಚ್ಚು ಮಾಡಿಕೊಂಡು ವಿಜಯಮಾಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ

   

Related Articles

error: Content is protected !!