Home » ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ದೀಪೋತ್ಸವ, ತೆಪೋತ್ಸವ
 

ಕೋಟ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದಲ್ಲಿ ದೀಪೋತ್ಸವ, ತೆಪೋತ್ಸವ

by Kundapur Xpress
Spread the love

ಕೋಟ : ಇಲ್ಲಿನ ಐತಿಹಾಸಿಕ ಪುರಾಣ ಪ್ರಸಿದ್ಧ ದೇಗುಲವಾದ ಕೋಟದ ಮಹತೋಭಾರ ಶ್ರೀ ಹಿರೇಮಹಾಲಿಂಗೇಶ್ವರ ದೇಗುಲದ ವಾರ್ಷಿಕ ದೀಪೋತ್ಸವ ಗುರುವಾರ ಜರಗಿತು. ಈ ಪ್ರಯುಕ್ತ ಕಿರಿ ರಂಗಪೂಜೆ,ತುಳಸಿಪೂಜೆ,ಬಲಿಪೂಜೆ,ಮಹಾಪೂಜೆ ಕ್ಷೇತ್ರ ಪಾಲ ಪೂಜೆ,ದೇಗುಲದ ತೀರ್ಥಕೆರೆಯಲ್ಲಿ ತೆಪೋತ್ಸವ ನಡೆಯಿತು. ಶ್ರೀ ದೇವರ ಉತ್ಸವ ಮೂರ್ತಿಯನ್ನು ಅರ್ಚಕ ರಾಜೇಂದ್ರ ಅಡಿಗ ತೀರ್ಥಕೆರೆ ತೇಪೋತ್ಸವಕ್ಕೆ ಕೊಂಡ್ಯೊಯ್ದರು.
ದೇಗುಲದ ವತಿಯಿಂದ ಪನಿವಾರ ಸೇವೆ ನಡೆಯಿತು. ದೇಗುಲದ ಸುತ್ತ ಹಣತಗಳನ್ನಿಟ್ಟು ಭಕ್ತರು ಕಾರ್ತಿಕ ಮಾಸದ ದೀಪೋತ್ಸವದಲ್ಲಿ ವಿಜೃಂಭಿಸಿಕೊAಡರು. ಈ ವೇಳೆ ದೇಗುಲದ ಪ್ರಧಾನ ಅರ್ಚಕ ಸದಾಶಿವ ಅಡಿಗ,ತಂತ್ರಿಗಳಾದ ನರಸಿಂಹ ಸೋಮಯಾಜಿ,ಸಹಾಯಕ ಅರ್ಚಕರಾದ ತೀರ್ಥೆಶ್ ಭಟ್,ಸುಬ್ರಹ್ಮಣ್ಯ ಅಡಿಗ,ಸ್ಥಳೀಯ ಭಕ್ತರಾದ ಜಿ.ಎಸ್ ಆನಂದ್ ದೇವಾಡಿಗ,ಅಜಿತ್ ದೇವಾಡಿಗ,ಸ್ಕಂದ ಶಂಕರ್,ದೇವಪ್ಪ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು.

 

Related Articles

error: Content is protected !!