267
ಕುಂದಾಪುರ : ನಗರದ ಶ್ರೀ ನಾರಾಯಣಗುರು ಯುವಕ ಮಂಡಲದ ವತಿಯಿಂದ 46ನೇ ವರ್ಷದ ಶಾರದೋತ್ಸವದ ನಿಮಿತ್ತ ಶ್ರೀ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ವಿದ್ವಾನ್ ಕೋಟ ಚಂದ್ರಶೇಖರ್ ಸೋಮಾಯಾಜಿಯವರ ಪೌರೋಹಿತ್ಯದಲ್ಲಿ ಶ್ರೀ ಶಾರದ ದೇವಿಯನ್ನು ಪ್ರತಿಷ್ಠಾಪಿಸಲಾಯಿತು ಬೆಳಿಗ್ಗೆ ಪುಣ್ಯಾಹ ಗಣಪತಿ ಪೂಜೆ ಸಂಕಲ್ಪ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು ಸಂಜೆ 5.30 ರಿಂದ ಬಿಲ್ಲವ ಮಹಿಳಾ ಘಟಕದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಿತು

ದಿನಾಂಕ 21 ರಂದು ಶನಿವಾರ ಬೆಳಿಗ್ಗೆ ಸತ್ಯನಾರಾಯಣ ಪೂಜೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದ್ದು ಸಂಜೆ ಕುಂದಾಪುರದ ಶ್ರೀ ಸಿದ್ಧಿವಿನಾಯಕ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮದ 7.30 ಕ್ಕೆ ಮಹಾಪೂಜೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ
ದಿನಾಂಕ 22 ರಂದು ಆದಿತ್ಯವಾರ ಚಂಡಿಕಾಹೋಮ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷರಾದ ಯೋಗೇಶ್ ಪೂಜಾರಿ ಕೋಡಿಯವರು ತಿಳಿಸಿದ್ದಾರೆ

