ಉಡುಪಿ: ಇಲ್ಲಿನ ಬಡಗುಬೆಟ್ಟು ಗ್ರಾಮ ಪಂಚಾಯಿತಿಯ ಶಾಂತಿನಗರ ಎಂಬಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಮತ್ತು ಬೈಕು ನಡುವೆ ನಡೆದ ಅಪಘಾತದಲ್ಲಿ, ಬೈಕು ಸವಾರ ಮೃತಪಟ್ಟ ಘಟನೆ ನಡೆದಿದೆ. ಜನಾರ್ದನ್ ಮೃತರು.
ಅವರು ಗೆಳೆಯನೊಂದಿಗೆ ಮಣಿಪಾಲದಿಂದ ಅಲೆವೂರಿಗೆ’ ತೆರಳುತ್ತಿದ್ದಾಗ ಮುಂಭಾಗದಿಂದ ಅತೀ ವೇಗದಿಂದ ಬಂದ ಲಾರಿಗೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಜನಾರ್ದನ್ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇನ್ನೊಬ್ಬ ಸವಾರ ಸಂತೋಷ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಲಾರಿಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸಲಾಗುತಿತ್ತು ಎಂದು *ಪತ್ತೆಯಾಗಿದೆ. ಮಣಿಪಾಲ ಠಾಣೆಯಲ್ಲಿ ಲಾರಿ ಮಾಲಕ ಮತ್ತು ಚಾಲಕರಿಬ್ಬರ ಮೇಲೆ ಪ್ರಕರಣ ದಾಖಲಾಗಿದೆ.