Home ಅಪರಾಧದನದ ಮಾಂಸ ಸಾಗಾಟ : ಇಬ್ಬರ ಬಂಧನ

ದನದ ಮಾಂಸ ಸಾಗಾಟ : ಇಬ್ಬರ ಬಂಧನ

by Kundapur Xpress

ಮಂಗಳೂರು : ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಬಜ್ಪೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳು ಮೂಡುಬಿದಿರೆಯ ಹಂಡೇಲು ನಿವಾಸಿ ಮೊಹಮ್ಮದ್ ಆರೀಫ್ (24) ಮೊಹಮ್ಮದ್ ಸುಲ್ತಾನ್ (19) ಎಂದು ಗುರುತಿಸಲಾಗಿದೆ.ಆರೋಪಿಗಳು ಬಜ್ಪೆಯ ಪೋಲಿಸ್ ಠಾಣಾ ವ್ಯಾಪ್ತಿಯ ಬಡಗ ಎಡಪದವು ಗ್ರಾಮದ ಬೈತಾರಿ ಎಂಬಲ್ಲಿ ವಾಹನದಲ್ಲಿ ದನದ ಮಾಂಸ ಸಾಗಾಟ ಮಾಡುತ್ತಿದ್ದರು. ಬಜಪೆ ಠಾಣೆಯ ಪಿಎಸ್‌ಐ ರೇವಣಸಿದ್ದಪ್ಪ ಅವರು ಸಿಬ್ಬಂದಿಯೊಂದಿಗೆ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.

ಜೊತೆಗೆ ಸುಮಾರು 2 ಲಕ್ಷ ರೂ. ಮೌಲ್ಯದ ಒಟ್ಟು 750 ಕೆ.ಜಿ. ತೂಕದ ದನದ ಮಾಂಸವನ್ನು ವಶಕ್ಕೆ ಪಡೆಯಲಾಗಿದೆ.ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಪ್ರಕರಣದ ಪ್ರಮುಖ ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ.

Related Articles