ಕುಂದಾಪುರ : ಸ್ಥಳೀಯ ಫಿಶ್ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ನಾಗಬೋಬ್ಬರ್ಯ ದೇವಸ್ಥಾನದಲ್ಲಿ 2025ನೇ ಫೆಬ್ರವರಿ 02ರಂದು ಚತುಃಪವಿತ್ರ ನಾಗಮಂಡಲ ನಡೆಯಲಿದ್ದು ಪೂರ್ವಭಾವಿಯಾಗಿ ಆದಿತ್ಯವಾರ ಬೆಳಿಗ್ಗೆ ದೇಗುಲದಲ್ಲಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು
ಉದ್ಯಮಿ ಜಿ. ದತ್ತಾನಂದ ರವರು ನಾಗಮಂಡಲೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು ದೇಗುಲದ ಅರ್ಚಕ ನಾರಾಯಣ ಹೊಳ್ಳರವರು ಮಾತನಾಡಿ ನಾಗಮಂಡಲ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಕೈಜೋಡಿಸಬೇಕೆಂದು ವಿನಂತಿಸಿದರು
ಸ್ಥಳೀಯ ಫಿಶ್ ಮಾರ್ಕೆಟ್ ರಸ್ತೆಯಲ್ಲಿರುವ ಶ್ರೀ ನಾಗ ಬೊಬ್ಬರ್ಯ ದೇಗುಲದಲ್ಲಿ ನಡೆದ ಸಮಾರಂಭದಲ್ಲಿ ಸೇವಾಕರ್ತರಾದ ಶ್ರೀಯುತ ಕೃಷ್ಣಯ್ಯ ಶೇರಿಗಾರ್ ಮತ್ತು ಸದಾಶಿವ ಶೇರಿಗಾರ್ ಹಾಗೂ ಪುರಸಭಾ ಸದಸ್ಯರಾದ ಶ್ರೀಧರ್ ಶೇರಿಗಾರ ಶಶಿರಾಜ್ ಪೂಜಾರಿ ಪ್ರೆಂಡ್ಸ್ ಸರ್ಕಲ್ನ ಗೌರವ ಅಧ್ಯಕ್ಷರಾದ ಶೀನ ಖಾರ್ವಿ ಪ್ರವೀಣ್ ಗಣೇಶ್ ನಾಯ್ಕ್ ಧರ್ಮನಂದ ಶಿವರಾಮ ಶೇರಿಗಾರ್ ಉಪಸ್ಥಿತರಿದ್ದರು
ಗೋವರ್ಧನ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಕೃಷ್ಣಯ್ಯ ಶೇರಿಗಾರ್ ಸ್ವಾಗತಿಸಿ ಯೋಗೀಶ್ ಕಿಣಿ ಧನ್ಯವಾದವಿತ್ತರು