Home » ಸಂಘಟನೆಗಳು ಸಂಘಟಿತವಾದರೆ ಗ್ರಾಮಗಳು ಸುಭಿಕ್ಷೆ
 

ಸಂಘಟನೆಗಳು ಸಂಘಟಿತವಾದರೆ ಗ್ರಾಮಗಳು ಸುಭಿಕ್ಷೆ

– ಆನಂದ್ ಸಿ ಕುಂದರ್

by Kundapur Xpress
Spread the love

ಕೋಟ : ಸಂಘಟನೆಗಳು ಸದೃಢವಾಗಿ ಸಂಘಟಿತ ಶಕ್ತಿಯಾಗಿ ಕಾರ್ಯನಿರ್ವಹಿಸಿದರೆ ಗ್ರಾಮಗಳು ಸುಭಿಕ್ಷೆಯಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ಕೋಟದ ಮಣೂರುಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದರು.  ಇಲ್ಲಿನ ಕೋಟತಟ್ಟು ಪಡುಕರೆ ನಂದಿಕೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ನಂದಿಕೇಶ್ವರ ಗೆಳೆಯರ ಬಳಗ ಕೋಟತಟ್ಟು-ಪಡುಕರೆ ಇದರ 13ನೇ ವರ್ಷದ ಯಕ್ಷಸಂಭ್ರಮ,ಸAಘದಸ್ವAತ ಸ್ಥಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ ಗ್ರಾಮದ ಅಭಿವೃದ್ಧಿಯಲ್ಲಿ ಸಂಘಸAಸ್ಥೆಗಳ ಪಾತ್ರ ಗಣನೀಯವಾದದ್ದು ಈ ದಿಸೆಯಲ್ಲಿ ನಂದಿಕೇಶ್ವರ ಗೆಳೆಯರ ಬಳಗ ಸ್ವಂತ ತಳಹದಿಯಲ್ಲಿ ನಿಂತು ಸಮಾಜದ ಒರೆಕೋರೆಗಳನ್ನು ತಿದ್ದುವ ವೇದಿಕೆಯಾಗಲಿ ಎಂದು ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ನಂದಿಕೇಶ್ವರ ಗೆಳೆಯರ ಬಳಗದ ಅಧ್ಯಕ್ಷ ಭಾಸ್ಕರ ಪೂಜಾರಿ ವಹಿಸಿದ್ದರು. ಅಭ್ಯಾಗತರಾಗಿ ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್ ಸದಸ್ಯರಾದ ರವೀಂದ್ರ ತಿಂಗಳಾಯ , ಅಶ್ವಿನಿ ದಿನೇಶ್, ನಂದಿಕೇಶ್ವರ ಗೆಳೆಯರ ಬಳಗದ ಗೌರವಾಧ್ಯಕ್ಷ ರಘು ತಿಂಗಳಾಯ ,ಗದ್ದೆ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಧಾನ ಅರ್ಚಕ ನಾಗರಾಜ್ ಕಾರಂತ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸದಸ್ಯರಾದ ಮಂಜುನಾಥ ಭಂಡಾರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.
ಸಂಘದ ಕಛೇರಿ ನಿರ್ಮಾಣದ ಹಿನ್ನಲ್ಲೆಯಲ್ಲಿ 13ಸೆಂಟ್ಸ್ ಸ್ಥಳವನ್ನು ಖರೀದಿಸಿದ್ದು ಆನಂದ್ ಸಿ ಕುಂದರ್ ಉದ್ಘಾಟಿಸಿದರು.ಈ ಪ್ರಯುಕ್ತ ಅಪರಾಹ್ನ ಅನ್ನಸಂತರ್ಪಣಾ ಕಾರ್ಯಕ್ರಮ ನೆರವೆರಿತು.
ರಾತ್ರಿ ಶ್ರೀ ನಂದಿಕೇಶ್ವರ ಪ್ರಸಾದಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮೆಕ್ಕೆಕಟ್ಟು ಶಿರಿಯಾರ ಇವರಿಂದ ಯಕ್ಷಗಾನ ಪ್ರಸಂಗಕರ್ತ ದೇವದಾಸ್ ಈಶ್ವರಮಂಗಲ ವಿರಚಿತ ಪ್ರಶ್ನಾರ್ಥಕ ಯಕ್ಷಗಾಮ ಪ್ರಸಂಗ ಪ್ರದರ್ಶನಗೊಂಡಿತು.

 

Related Articles

error: Content is protected !!