ಕೋಟ : ಬಾಂಧವ್ಯ ಫೌಂಡೇಶನ್ ಕರ್ನಾಟಕ ಇವರ ನೆರಳು ಯೋಜನೆಯಿಂದ 12ನೇ ಮನೆಯನ್ನು ಕೋಟತಟ್ಟು ಪಡುಕರೆ ನಿವಾಸಿ ಜಯಪೂಜಾರಿಯವರಿಗೆ ಹಸ್ತಾಂತರ ಮಾಡಲಾಯಿತು.
ಈ ಹಿನ್ನಲ್ಲೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಕರಾವಳಿ ದೈವನರ್ತಕ ಸಂತೋಷ್ ಕುಮಾರ್ ಆರ್ಡಿಯವರಿಗೆ ಕರಾವಳಿ ಸಿರಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕುಂದಾಪುರದ ಬದುಕು ತಂಡಕ್ಕೆ ವಿಶೇಷ ಗೌರವ ನೀಡಿ ಸನ್ಮಾನಿಸಲಾಯಿತು. ಬಾರಕೂರು ಜಲಂದರ ಪೂಜಾರಿ ಇವರಿಗೆ ಕ್ಯಾನ್ಸರ್ ಚಿಕಿತ್ಸೆಗೆ 10 ಸಾವಿರ ಸಹಾಯಧನ ವಿತರಿಸಲಾಯಿತು.
ಬಾಂಧವ್ಯ ಫೌಂಡೇಶನ್‌ನ ಸ್ಥಾಪಕಧ್ಯಕ್ಷ ದಿನೇಶ್ ಬಾಂಧವ್ಯ ಅತಿಥಿಗಳನ್ನು ಸ್ವಾಗತಿಸಿ ಯೋಜನೆ ನೆಡೆದು ಬಂದ ದಾರಿಗಳ ಬಗ್ಗೆ ಮಾತನಾಡಿ ಯೋಜನೆಗೆ ಸಹಕಾರ ನೀಡಿದವರನ್ನು ಗೌರವಿಸಿ ಮನೆಯ ಮಾಲಕಿಗೆ ಕೀ ಹಸ್ತಾಂತರಿಸಿದರು.
ಪಾಂಡೇಶ್ವರದ ರಕ್ತೇಶ್ವರಿ ದೇವಸ್ಥಾನದ ಧರ್ಮದರ್ಶಿ ಕೆ.ವಿ ರಮೇಶ್ ರಾವ್, ರಂಗಭೂಮಿ ನಿರ್ದೇಶಕ ಮತ್ತು ನಟ ಬಾಸುಮ ಕೊಡಗು, ವಿವೇಕ ಪ.ಪೂ ಕಾಲೇಜ್‌ನ ಪ್ರಾಂಶುಪಾಲ ಜಗದೀಶ್ ನಾವಡ, ಉಡುಪಿ ಟೌನ್ ಆರಕ್ಷಕ ಠಾಣೆ ಎಎಸ್‌ಐ ಜಯಕರ್ ಐರೋಡಿ, ಅಂಚೆ ಕಚೇರಿ ಅಧಿಕಾರಿ ರೇಷ್ಮಾ ವಾಸುದೇವ ನಾಯಕ್, ಕಸ್ತೂರ್ಬಾ ಆಸ್ಪತ್ರೆ ಗ್ರಾಹಕ ಆರೈಕೆ ವಿಭಾಗದ ಸಿಬ್ಬಂದಿ ಬಾಗ್ಯಲಕ್ಷ್ಮೀ ಕಿಣಿ ಮತ್ತಿತರು ಉಪಸ್ಥಿತರಿದ್ದರು.ಬಾಂಧವ್ಯ ಟ್ರಸ್ಟಿ ಡಾ.ಜ್ಯೋತಿ ಸಾಮಂತ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

