Home » ಹೊಸ ವರ್ಷದ ನೆಪದಲ್ಲಿ ವಂಚನೆ ಸಾಧ್ಯತೆ ಜಾಗ್ರತೆ
 

ಹೊಸ ವರ್ಷದ ನೆಪದಲ್ಲಿ ವಂಚನೆ ಸಾಧ್ಯತೆ ಜಾಗ್ರತೆ

ಎಪಿಕೆ ಫೈಲ್' ತೆರೆಯದಂತೆ ಸೂಚನೆ

by Kundapur Xpress
Spread the love

ಕುಂದಾಪುರ : ಸೈಬರ್ ವಂಚಕರು ಹೊಸ ವರ್ಷದ ಸಂಭ್ರಮವನ್ನು ಬಳಸಿಕೊಂಡು ವಂಚಿಸುವ ಸಾಧ್ಯತೆ ಇದ್ದು ಸಾರ್ವಜನಿಕರು ಎಚ್ಚದಿಂದ. ಇರುವಂತೆ ಪೊಲೀಸರು ತಿಳಿಸಿದ್ದಾರೆ.

ಹೊಸ ವರ್ಷಕ್ಕೆ ಶುಭಾಶಯ ಕೋರುವ ಲಿಂಕ್‌ಗಳನ್ನು ಎಪಿಕೆ ಫೈಲ್ ಗಳಲ್ಲಿ(APK) ಮೊಬೈಲ್‌ಗೆ ಕಳುಹಿಸಿ ಮೊಬೈಲ್ ಹ್ಯಾಕ್ ಮಾಡುವ ಸಾಧ್ಯತೆ ಇದೆ ಮೊಬೈಲ್ ಹ್ಯಾಕ್ ಮಾಡಿದ ಬಳಿಕ ಆ ಮೊಬೈಲ್‌ನಿಂದ ವಾಟ್ಸ್ ಆ್ಯಪ್ ಸಹಿತ ಸಾಮಾಜಿಕ ಜಾಲತಾಣಗಳ ಮೂಲಕ ಹಾನಿಕಾರಕ ಲಿಂಕ್ ಮತ್ತು ಎಪಿಕೆ ಫೈಲ್‌ಗಳನ್ನು ದೊಡ್ಡ ಮಟ್ಟದಲ್ಲಿ ಶೇರ್ ಮಾಡುವ ಸಾಧ್ಯತೆ ಇರುತ್ತದೆ. ಸಾರ್ವಜನಿಕರು ಹೊಸ ವರ್ಷದ ಶುಭಾಶಯ ಕೋರುವ ಯಾವುದೇ ಎಪಿಕೆ ಫೈಲ್‌ಗಳನ್ನು ವಾಟ್ಯಾಪ್ ಸಹಿತ ಸಾಮಾಜಿಕ ಜಾಲತಾಣದಿಂದ ಸ್ವೀಕರಿಸಿಕೊಂಡರೆ ಅದನ್ನು ಕೂಡಲೇ ಡಿಲೀಟ್ ಮಾಡಬೇಕು. ಯಾವುದೇ ಸೈಬರ್ ಅಪರಾಧಕ್ಕೆ ಒಳಗಾದಲ್ಲಿ ‌1930 ಕ್ಕೆ ಕರೆ ಮಾಡಿ ದೂರು ಸಲ್ಲಿಸುವಂತೆ ಪೊಲೀಸರು ತಿಳಿಸಿದ್ದಾರೆ.

 

Related Articles

error: Content is protected !!