Home » ಮೀನುಗಾರಿಕ ಸಚಿವರ ವಿರುದ್ಧ ಮುಳುಗು ತಜ್ಞ ಈಶ್ವರ್ ಮಲ್ಪೆ ಆಕ್ರೋಶ
 

ಮೀನುಗಾರಿಕ ಸಚಿವರ ವಿರುದ್ಧ ಮುಳುಗು ತಜ್ಞ ಈಶ್ವರ್ ಮಲ್ಪೆ ಆಕ್ರೋಶ

ದೇಹ ಪತ್ತೆ ಹಚ್ಚಲು ಹೆಲಿಕಾಪ್ಟರ್ ನ ನೆರವು ನೀಡಿ

by Kundapur Xpress
Spread the love

ಬೈಂದೂರು : ಗಂಗೊಳ್ಳಿ ಸಮುದ್ರದಲ್ಲಿ ಸರ್ವಮಂಗಳ ಬೋಟಿನಲ್ಲಿ ಮೀನುಗಾರಿಕೆಗೆ ತೆರಳಿದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕಡಲಿಗೆ ಬಿದ್ದು ನಾಪತ್ತೆಯಾದ ನಾರಾಯಣ ಮೊಗವೀರರ ದೇಹ ಕಳೆದ ಎಂಟು ದಿನಗಳಿಂದ ಸಮುದ್ರದಲ್ಲಿ ಹುಡುಕಿದರೂ ದೇಹದ ಕುರುಹು ಪತ್ತೆಯಾಗದ ಹಿನ್ನೆಲೆಯಲ್ಲಿ ಇಂದು ಸಮಾಜ ಸೇವಕ ಆಪದ್ಬಾಂಧವ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅವರ ತಂಡದವರು ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿ ಸಾಂತ್ವಾನ ಹೇಳಿ ಮಾಧ್ಯಮದ ಜೊತೆ ಮಾತನಾಡಿದರು,

ಮೀನುಗಾರರ ಕೆಲಸವೇ ನೀರ ಮೇಲಿನ ಗುಳ್ಳಿ ಇದ್ದ ಹಾಗೆ !ಎನ್ನುವ ಗಾದೆ ಇದೆ, ಆದರೆ ನಾರಾಯಣ ಮೊಗವೀರ ನೀರಿನ ಮೇಲಿನ ಗುಳ್ಳಿಕಿಂತಲೂ ಕಡೆಯಾದರೆ ಎನ್ನುವ ಪ್ರಶ್ನೆ ಎಂಬಂತಾಗಿದೆ ಎಂದು ಈಶ್ವರ್ ಮಲ್ಪೆ ಮೀನುಗಾರಿಕಾ ಸಚಿವರ ವಿರುದ್ಧ ಆಕ್ರೋಶ ಹೊರ ಹಾಕಿದರು,

ಮಾನ್ಯ ಮೀನುಗಾರಿಕಾ ಸಚಿವರೇ ಬಡ ಮೀನುಗಾರರ ದೇಹ ಪತ್ತೆಹಚ್ಚಲು ಹೆಲಿಕಾಪ್ಟರ್ ಬಳಸುವುದು ಸೂಕ್ತ ಎಂದು ಮುಳುಗು ತಜ್ಞ ಈಶ್ವರ್ ಮಲ್ಪೆ ಯವರ ಅಭಿಪ್ರಾಯವಾಗಿದೆ

ನಾರಾಯಣ ಮೊಗವೀರರ ದೇಹ ಒಂಬತ್ತು ದಿನ ಆಗಿರುವ ಹಿನ್ನೆಲೆಯಲ್ಲಿ ದೇಹ ಭಟ್ಕಳ, ಕಾರವಾರ, ಗೋವಾ ಕಡೆ ಹೋಗಿರಬಹುದು , ಮೀನುಗಾರಿಕೆ ತೆರಳಿದ ಬೋಟಿನ ಮೀನುಗಾರರು, ದೇಹವನ್ನು ಎಲ್ಲಿಯಾದರೂ ಕಾಣಿಸಿದರೆ ತಕ್ಷಣ ಸಂಬಂಧಪಟ್ಟವರಿಗೆ ತಿಳಿಸಿ, ಹಾಗೂ ನನ್ನ ವೈಯಕ್ತಿಕ ನೆಲೆಯಲ್ಲಿ 25,000 ನೀಡುವುದಾಗಿ ತಿಳಿಸಿದರು

 

Related Articles

error: Content is protected !!