Home » ಒಳ್ಳೆಯವರು ಧ್ಯೇಯದೊಂದಿಗೆ ರಾಜಕೀಯಕ್ಕೆ ಬನ್ನಿ
 

ಒಳ್ಳೆಯವರು ಧ್ಯೇಯದೊಂದಿಗೆ ರಾಜಕೀಯಕ್ಕೆ ಬನ್ನಿ

by Kundapur Xpress
Spread the love

ಹೊಸದಿಲ್ಲಿ : ಒಳ್ಳೆಯವರು ರಾಜಕೀಯಕ್ಕೆ ಬರಬೇಕಾದ ಅಗತ್ಯವಿದೆ. ಹೀಗೆ ಬರುವಾಗ ಮಹತ್ವಾಕಾಂಕ್ಷೆಯ ಬದಲಿಗೆ ಧೈಯದೊಂದಿಗೆ ಬರಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಯುವ ಉದ್ಯಮಿ ಝರೋದಾ ಸಹ ಸಂಸ್ಥಾಪಕ ನಿಖಿಲ್ ಕಾಮತ್‌ ನಡೆಸಿಕೊಟ್ಟ  ಪೀಪಲ್ ಬೈ ಡಬ್ಲ್ಯೂಟಿಎಫ್’ ಪಾಡ್ ಕಾಸ್ಟ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ ನಾನೂ ಮನುಷ್ಯನೇ, ನಾನು ದೇವರಲ್ಲ, ನನ್ನಿಂದಲೂ ಕೆಲವೊಂದು ತಪ್ಪುಗಳು ಆಗುತ್ತವೆ ಎಂದು ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಪ್ರಧಾನಿಯವರು ಪಾಡ್‌ಕಾಸ್ಟ್‌ವೊಂದರ ಸಂವಾದದಲ್ಲಿ ಭಾಗಿಯಾದರು

ಈ ಪಾಡ್‌ಕಾಸ್ಟ್‌ನಲ್ಲಿ ಪ್ರಧಾನಿಯವರು ಹಲವು ಮಹತ್ವದ ಸಂಗತಿಗಳನ್ನು ಹಂಚಿಕೊಂಡಿದ್ದು, ಇದರ ತುಣುಕುಗಳನ್ನು ಕಾಮತ್ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದು ರಾಜಕೀಯ ಮತ್ತು ಉದ್ಯಮಶೀಲತೆಯ ನಡುವೆ ಸೇತುವನ್ನು ನಿರ್ಮಿಸುವಲ್ಲಿ ವೇದಿಕೆಯಾಗಿದ್ದು ಹಲವು ಮೌಲಿಕ ಒಳನೋಟಗಳನ್ನು ನೀಡುತ್ತದೆ.

ಜಾಗತಿಕ ಸಂಘರ್ಷ, ರಾಜಕೀಯದಲ್ಲಿ ಯುವಶಕ್ತಿಯ ಪಾಲ್ಗೊಳ್ಳುವಿಕೆ, ಪ್ರಧಾನಿ ಮೋದಿಯವರ ಸತತ ಅಧಿಕಾರಾವಧಿ… ಹೀಗೆ ಅನೇಕ ವಿಷಯಗಳು ಸಂವಾದದಲ್ಲಿ ಪ್ರಸ್ತಾವವಾಗಿವೆ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಭಾಷಣವೊಂದನ್ನು ಕಾಮತ್ ಪ್ರಸ್ತಾಪಿಸಿದಾಗ, ನಾನು ಆಗ ಸೂಕ್ಷ್ಮತೆಯ ಕೊರತೆಯಿಂದ ತಪ್ಪು ಹೇಳಿಕೆ ನೀಡಿರಬಹುದು. ನಾನೂ ಒಬ್ಬ ಮನುಷ್ಯ ದೇವರಲ್ಲ ಎಂದರು.

ಇದು ಮೊದಲ ಪಾಡ್‌ಕಾಸ್ಟ್

ಆರಂಭದಲ್ಲಿ ನಿಖಿಲ್ ಕಾಮತ್ ‘ನಾನು ಇಲ್ಲಿ ನಿಮ್ಮ ಮುಂದೆ ಕುಳಿತು ಮಾತನಾಡುತ್ತಿದ್ದೇನೆ. ನನಗೆ ಭಯ ಆಗುತ್ತಿದೆ. ನನಗಿದು ಕಠಿಣ ಸಂಭಾಷಣೆಯಾಗಿದೆ’ ಎಂದು ಹಿಂದಿಯಲ್ಲಿ ಹೇಳಿದರು. ಆಗ ಪ್ರಧಾನಿ ಮೋದಿ, ‘ಇದು ನನ್ನ ಮೊದಲ ಪಾಡ್ ಕಾಸ್ಟ್. ಇದು ನಿಮ್ಮ ಪ್ರೇಕ್ಷಕರಿಗೆ ಹೇಗೆ ತಲುಪುತ್ತದೆ ಎಂಬುದು ನನಗೆ ತಿಳಿದಿಲ್ಲ’ ಎಂದು ನಗುತ್ತಾ ಪ್ರತಿಕ್ರಿಯಿಸಿದರು.

 

Related Articles

error: Content is protected !!