ಹುಕ್ಕೇರಿ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇದೇ ಅವಧಿಯಲ್ಲಿ ಸಿಎಂ ಆಗುವುದು ನಿಶ್ಚಿತ ಎಂದು ಚಿಕ್ಕಮಗಳೂರು ಗೌರಿಗದ್ದೆಯ ಅವಧೂತ ವಿನಯ ಗುರೂಜಿ ಭವಿಷ್ಯ ನುಡಿದರು. ಬೆಳಗಾವಿ ಜಿಲ್ಲೆ ಹುಕ್ಕೇರಿ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ ಪಕ್ಷವನ್ನು ಸಂಘಟಿಸಲು ಡಿ.ಕೆ.ಶಿವ ಕುಮಾರ್ ಸಾಕಷ್ಟು ಶ್ರಮಿಸಿದ್ದಾರೆ. ಅವರು ಸಿಎಂ ಆದರೆ ನಾನು ಖುಷಿ ಪಡುತ್ತೇನೆ ನಾಟಕ ಇಲ್ಲದ ರಾಜಕಾರಣಿ ಅವರು. ಅವರಿಗೆ ನಾಟಕ ಮಾಡಲು ಬರುವುದಿಲ್ಲ. ವೈಕುಂಠ ಏಕಾದಶಿ ದಿನ ಡಿಕೆಶಿ ಸಿಎಂ ಆಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಡಿಕೆಶಿಗೆ ಅಜ್ಜಯ್ಯನ ಮೇಲೆ ನಿಷ್ಠೆ, ಧರ್ಮದ ಮೇಲೆ ಶ್ರದ್ದೆ ಇದೆ. ಗುರುಗಳ ಅನುಗ್ರಹದಿಂದ ಇದೇ ಅವಧಿಯಲ್ಲಿ ಅವರು ಸಿಎಂ ಸೀಟಲ್ಲಿ ಕೂರುತ್ತಾರೆ ಎಂದು ಭವಿಷ್ಯ ನುಡಿದರು.