ಗಂಗೊಳ್ಳಿ; ಗಂಗೊಳ್ಳಿ ಠಾಣಾ ಪಿಎಸ್‌ಐ ವಿನಯ ಕೊರ್ಲಹಳ್ಳಿ ರವರು ತನ್ನ ಸಿಬ್ಬಂದಿಯವರೊಂದಿಗೆ ರೌಂಡ್ಸ್‌ನಲ್ಲಿರುವಾಗ ತ್ರಾಸಿ ಗ್ರಾಮದ ಪ್ರವಾಸಿ ಮಂದಿರದ ಬಳಿ ಒಬ್ಬ ಹುಡುಗನು ಕುಳಿತು ಗಾಂಜಾ ಸೇವಿಸುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಪರಿಶೀಲಿಸಲಾಗಿದ್ದು ಆತನು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದಿರುವುದರಿಂದ ಆತನನ್ನು ಸಿಬ್ಬಂದಿಯವರೊಂದಿಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತನು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ ಅಬ್ದುಲ್ ಮುನಾಫ್, (20ವರ್ಷ) ಈತನ ಮೇಲೆ ಗಂಗೊಳ್ಳಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ