Home ಅಪರಾಧಅಪಘಾತ: ತಾಯಿ ಮಗಳು ಪಾರು

ಅಪಘಾತ: ತಾಯಿ ಮಗಳು ಪಾರು

by Kundapur Xpress

ಅಪಘಾತ: ತಾಯಿ ಮಗಳು ಪಾರು

ಬೈಂದೂರು : ಕೊಲ್ಲೂರು ಬಳಿಯ ಮಾರಿಕಟ್ಟೆ ನಿವಾಸಿಯಾದ ಪಾರ್ವತಿ ಬಿಲ್ಲವ  ಎಂಬವರು ತನ್ನ ಮಗಳಾದ ಪಂಚಮಿಯೊಂದಿಗೆ ತನ್ನ ತಾಯಿಯ ಮನೆಗೆ ತೆರಳುತ್ತಿದ್ದು ಕೊಲ್ಲೂರಿನಿಂದ ಬಸ್ಸಿನಲ್ಲಿ ಬೈಂದೂರಿಗೆ ಬಂದು ಬೈಂದೂರಿನ ಹೊಸ ಬಸ್ಸ್ ನಿಲ್ದಾಣದ ಬಳಿ ಸರ್ಕಲ್ ಹತ್ತಿರ  ರಸ್ತೆ ದಾಟಲು ನಿಂತುಕೊಂಡಿರುವಾಗ ಶಿರೂರು ಕಡೆಯಿಂದ ಕುಂದಾಪುರ ಕಡೆಗೆ ಹೋಗುವ ಒಂದು  ಲಾರಿಯ ಚಾಲಕನು ತನ್ನ ಲಾರಿಯನ್ನು ಅತಿ ವೇಗ ಹಾಗೂ ಅಜಾಗರುಕತೆಯಿಂದ  ಚಲಾಯಿಸಿಕೊಂಡು ಬಂದು ಪಾರ್ವತಿ ಬಿಲ್ಲವ ಹಾಗೂ  ಅವರ  ಮಗಳಿಗೆ ಡಿಕ್ಕಿ ಹೊಡೆದಿದ್ದು ಪಾರ್ವತಿ ಬಿಲ್ಲವ ರವರು  ಹಾಗೂ ಅವರು ಮಗಳು ರಸ್ತೆಗೆ ಬಿದ್ದಿದ್ದು ಪಾರ್ವತಿ ಬಿಲ್ಲವರವರಿಗೆ ಈ ಅಘಾತತದಿಂದ ಬಲ ಭುಜಕ್ಕೆ ಒಳಜಖಂ ಹಾಗೂ ಕಾಲಿನ ಮೂಳೆ ಮುರಿತ ವಾಗಿದ್ದು ಮಗಳಿಗೆ ತರಚಿದ ಗಾಯ ಉಂಟಾಗಿರುತ್ತದೆ, ಹೆಚ್ಚಿನ ಚಿಕಿತ್ಪೆಗಾಗಿ ಇವರನ್ನು  ಕುಂದಾಫುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಲಾರಿಯ  ಚಾಲಕ ಕಲ್ಲಪ್ಪನ ಮೇಲೆ   ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related Articles