Home » ಲಕ್ಷಾಂತರ ಅಯ್ಯಪ್ಪ ಭಕ್ತರಿಂದ ಮಕರಜ್ಯೋತಿ ಪುಣ್ಯದರ್ಶನ
 

ಲಕ್ಷಾಂತರ ಅಯ್ಯಪ್ಪ ಭಕ್ತರಿಂದ ಮಕರಜ್ಯೋತಿ ಪುಣ್ಯದರ್ಶನ

by Kundapur Xpress
Spread the love

ಪಟ್ಟಣಂತಿಟ್ಟ : ಹಿಂದುಗಳ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲೊಂದಾದ ಶಬರಿಮಲೆ ಸನ್ನಿಧಾನದಲ್ಲಿ ಮಂಗಳವಾರ ಸೇರಿದ್ದ ಲಕ್ಷಾಂತರ ಸಂಖ್ಯೆಯ ಭಕ್ತರು ಪೊನ್ನಂಬಲಮೇಡುನಲ್ಲಿ ಕಂಡು ಬಂದ ಮಕರಜ್ಯೋತಿಯ ದರ್ಶನಗೈದು ಕೃತಾರ್ಥರಾದರು. ಮಕರ ಸಂಕ್ರಾಂತಿಯಂದು ದೀಪಾರಾಧನೆಯ ಬಳಿಕ ಪೊನ್ನಂಬಲಮೇಡುವಿನ ಕಡೆಯಿಂದ ಆಕಾಶದಲ್ಲಿ ಮಕರಜ್ಯೋತಿಯ ದರ್ಶನವಾಗುವುದು.ಇದರಂತೆ ಮಂಗಳವಾರ ಸಂಜೆ ಮಕರ ನಕ್ಷತ್ರದೊಂದಿಗೆ ಮಕರಜ್ಯೋತಿ ಮೂರು ಬಾರಿ ದರ್ಶನವಾಗುತ್ತಿದ್ದಂತೆ ಭಕ್ತಸ್ತೋಮ ”ಸ್ವಾಮಿಯೇ ಶರಣಂ ಅಯ್ಯಪ್ಪಾ”ಎಂದು ಭಕ್ತಿಯಿಂದ ಘೋಷ ಮೊಳಗಿಸಿದರು.

ಈ ಸಂದರ್ಭ, ಪಂದಳಂ ಅರಮನೆಯಿಂದ ಜ.12ರಂದು ತಿರುವಾಭರಣಂ ಘೋಷಯಾತ್ರೆಯ ಮೂಲಕ ತಂದಿರುವ ವಿಶೇಷ ಆಭರಣಗಳಿಂದ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಶಬರಿಮಲೆಯ ಸುತ್ತಲಿನ 18 ಪವಿತ್ರ ಬೆಟ್ಟಗಳಲ್ಲಿ ಭಕ್ತರು ಸೇರಿ ಮಕರಜ್ಯೋತಿಗಾಗಿ ಕಾದಿದ್ದು, ಜ್ಯೋತಿ ಬೆಳಗುತ್ತಿದ್ದಂತೆ ಭಾವಪರವಶರಾಗಿ ಧನ್ಯತೆ ಅನುಭವಿಸಿದರು

1.5ಲಕ್ಷಕ್ಕೂ ಅಧಿಕ ಭಕ್ತರು ಈ ಸಂದರ್ಭ ಪಾಲ್ಗೊಂಡಿದ್ದಾಗಿ ಅಂದಾಜಿಸಲಾಗಿದೆ. ಸೋಮವಾರವೊಂದೇ ದಿನ 64,194ಮಂದಿ ಭಕ್ತರು ಮುಂಜಾನೆ 6ಗಂಟೆಗೇ ಶಬರಿಮಲೆಗೆ ಬಂದಿದ್ದರು. ಭಕ್ತರಿಗಾಗಿ ವ್ಯಾಪಕ ಸುರಕ್ಷತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

 

Related Articles

error: Content is protected !!