ಮುಂಬೈ : ನವೀ ಮುಂಬೈನ ಖಾರ್ಗರ್ ಪ್ರದೇಶದಲ್ಲಿ ಹೊಸ ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞೆ ಸೊಸೈಟಿ (ಇಸ್ಕಾನ್) ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಉದ್ಘಾಟಿಸಿದರು.
ಶ್ರೀ ಶ್ರೀ ರಾಧಾ ಮದನ್ ಮೋಹನ್ ಜಿ ದೇವಾಲಯ ಎಂಬ ಹೆಸರಿನ ದೇವಾಲಯದ ಉದ್ಘಾಟನೆಯ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕಾಗಿ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದರು. ಇಸ್ಕಾನ್ ಪ್ರಯತ್ನಗಳೊಂದಿಗೆ ಜ್ಞಾನ ಮತ್ತು ಭಕ್ತಿಯ ಈ ಮಹಾನ್ ಭೂಮಿಯಲ್ಲಿ ಶ್ರೀ ಶ್ರೀ ರಾಧಾ ಮದನ್ ಮೋಹನ್ ಜಿ ದೇವಾಲಯವನ್ನು ಉದ್ಘಾಟಿಸಲಾಗಿದೆ. ದೈವಿಕ ಉದ್ಘಾಟನೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆಯುತ್ತಿರುವುದು ನನ್ನ ಅದೃಷ್ಟ ಎಂದು ಪ್ರಧಾನಿ ಹೇಳಿದ್ದಾರೆ
ಶ್ರೀ ಶ್ರೀ ರಾಧಾ ಮದನ್ ಮೋಹನ್ ಮಂದಿರ ಪರಿಷತ್‌ನ ರೂಪರೇಖೆ, ಈ ದೇವಾಲಯದ ಹಿಂದಿನ ಕಲ್ಪನೆ, ಅದರ ರೂಪವು ಆಧ್ಯಾತ್ಮಿಕತೆ ಮತ್ತು ಜ್ಞಾನದ ಸಂಪೂರ್ಣ ಸಂಪ್ರದಾಯವನ್ನು ಪ್ರತಿಬಿಂಬಿಸುತ್ತದ್ದೆ. ದೇವಾಲಯದಲ್ಲಿ ದೇವರ ವಿವಿಧ ರೂಪಗಳನ್ನು ಕಾಣಬಹುದು. ಈ ದೇವಾಲಯ ಸಂಕೀರ್ಣವು ಭಾರತದ ನಂಬಿಕೆ ಮತ್ತು ಪ್ರಜ್ಞೆಯನ್ನು ಶ್ರೀಮಂತಗೊಳಿಸುವ ಪವಿತ್ರ ಕೇಂದ್ರವಾಗಲಿದೆ ಎಂದು ನನಗೆ ವಿಶ್ವಾಸವಿದೆ. ಈ ಉದಾತ್ತ ಕಾರ್ಯಕ್ಕಾಗಿ ನಾನು ಇಸ್ಕಾನ್ ನ ಎಲ್ಲಾ ಸಂತರು ಮತ್ತು ಸದಸ್ಯರನ್ನು ಮತ್ತು ಮಹಾರಾಷ್ಟ್ರದ ಜನರನ್ನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದರು.