Home » ಭಾರತದ ಜತೆ ಟ್ರಂಪ್‌ ಸರಕಾರದ ಮೊದಲ ದ್ವಿಪಕ್ಷೀಯ ಸಭೆ
 

ಭಾರತದ ಜತೆ ಟ್ರಂಪ್‌ ಸರಕಾರದ ಮೊದಲ ದ್ವಿಪಕ್ಷೀಯ ಸಭೆ

ಇದು ಐತಿಹಾಸಿಕ ಸಭೆ

by Kundapur Xpress
Spread the love

ವಾಷಿಂಗ್ಟನ್ : ಅತ್ಯಂತ ಮಹತ್ವದ ವಿದ್ಯಮಾನದಲ್ಲಿ ಡೊನಾಲ್ಡ್ ಟ್ರಂಪ್‌ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಅವರ ಸರ್ಕಾರದ ಮೊದಲ ದ್ವಿಪಕ್ಷೀಯ ಸಭೆ ಭಾರತದ ಜತೆ ನಡೆದಿದೆ. ಇದು ಐತಿಹಾಸಿಕ ಎಂದು ಬಣ್ಣಿಸಲಾಗಿದೆ.

ಟ್ರಂಪ್ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ನೇಮಕಗೊಂಡಿರುವ ಮಾರ್ಕೋ ರುಬಿಯೋ ತಮ್ಮ ಮೊದಲ ದ್ವಿಪಕ್ಷೀಯ ಸಭೆಯನ್ನು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಜೊತೆ ನಡೆಸಿದ್ದಾರೆ. ಇದನ್ನು ‘ಟ್ರಂಪ್ ಸರ್ಕಾರವು ಭಾರತಕ್ಕೆ ನೀಡುವ ಗೌರವ’ ಎಂದೂ ವಿಶ್ಲೇಷಿಸಲಾಗಿದೆ.

ಐತಿಹಾಸಿಕ ಏಕೆ?

ಅಮೆರಿಕದಲ್ಲಿ ಸಾಮಾನ್ಯವಾಗಿ ಸಂಪ್ರದಾಯದಂತೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೊದಲ ಅಂತಾರಾಷ್ಟ್ರೀಯ ಸಭೆಯನ್ನು ನೆರೆಯ ಕೆನಡಾ, ಮೆಕ್ಸಿಕೋ ಅಥವಾ ನ್ಯಾಟೋ ರಾಷ್ಟ್ರಗಳೊಂದಿಗೆ ನಡೆಸುತ್ತದೆ. ಆದರೆ ಇದೇ ಮೊದಲ ಸಲ ಭಾರತದೊಂದಿಗೆ ನಡೆಸಿದೆ. ಹೀಗಾಗಿ ಐತಿಹಾಸಿಕ ಸಭೆ ಇದು ಎಂದು ಬಣ್ಣಿಸಲಾಗಿದೆ. ಟ್ರಂಪ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಜೈಶಂಕರ್ ಅಮೆರಿಕಕ್ಕೆ ತೆರಳಿದ್ದರು. ಬಳಿಕ ಈ ಮಹತ್ವದ ಸಭೆ ನಡೆಸಿದ್ದಾರೆ

 

Related Articles

error: Content is protected !!