Home » ಯುವ ವೇದಿಕೆ ಎಂಟನೇ ವರ್ಷದ ವಾರ್ಷಿಕೋತ್ಸವ
 

ಯುವ ವೇದಿಕೆ ಎಂಟನೇ ವರ್ಷದ ವಾರ್ಷಿಕೋತ್ಸವ

ಅನ್ವೇಷಣೆ-2025 ಕಾರ್ಯಕ್ರಮ

by Kundapur Xpress
Spread the love

ಕೋಟ : ಯುವ ವೇದಿಕೆಯ ಸಮಾಜಮುಖಿ ಕಾರ್ಯಭಾರ ಅತ್ಯಂತ ಪ್ರಶಂಸನೀಯ ಎಂದು ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ ಎಸ್ ಕಾರಂತ ಹೇಳಿದರು.
ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಇದರ ಆಶ್ರಯದಲ್ಲಿ ಎಂಟನೇ ವರ್ಷದ ವಾರ್ಷಿಕೋತ್ಸವ ಅನ್ವೇಷಣೆ ಶೀರ್ಷಿಕೆಯಡಿ ನಡೆದ ಸಾಂಸ್ಕ್ರತಿಕ ಪರ್ವ,ವಿದ್ಯಾ ನಿಧಿ ವಿತರಣಾ ಕಾರ್ಯಕ್ರಮವನ್ನು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ.ಎಸ್ ಕಾರಂತ್ ಉದ್ಘಾಟಿಸಿ ಮಾತನಾಡಿ
ಗುಣಮಟ್ಟದ ಕಾರ್ಯಕ್ರಮಗಳಿಂದ ಯುವ ವೇದಿಕೆ ಗುರುತಿಸಿಕೊಂಡಿದೆ,ಸಾಧಕರನ್ನುಗೌರವಿಸುವ ಮನಸ್ಥಿತಿ ,ಗುಣಾತ್ಮಕ ಬೆಳವಣಿಗೆಗಳು ಸಮಾಜದ ಏಳಿಗೆ ಸಾಧ್ಯ ಎಂದರು.
ಸಮಾಜಮುಖಿ ಕಾರ್ಯಗಳು ರಾಷ್ಟ್ರಹಿತಕ್ಕಾಗಿ ನಡೆಯಬೇಕು ಅದೇ ರೀತಿ ದೊಡ್ಡ ಮಟ್ಟದ ರಾಷ್ಟ್ರಹಿತಕಾಯಕ ಯುವ ವೇದಿಕೆ ಮಾಡಿದ್ದಾರೆ,ಸಂಘ ಸಂಸ್ಥೆಗಳ ಒಳ್ಳೆ ಕೆಲಸಗಳಿಗೆ ಕಾಲೆಳೆಯುವರ ಸಂಖ್ಯೆ ಪ್ರಸ್ತುತ ದಿನಗಳಲ್ಲಿ ಅತಿಯಾಗಿದೆ, ಯಾವುದೇ ಸಂಘಟನೆ ಭಿನ್ನಾಭಿಪ್ರಾಯ ಬರದಂತೆ ಕಾಯ್ದು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲು ಅವರಿಗೆ ಶಕ್ತಿ ತುಂಬುವ ಕಾರ್ಯಮಾಡಬೇಕು ಎಂದು ಬೆಂಗಳೂರಿನ ಶೇಖರ್ ಆಸ್ಪತ್ರೆಯ ನಿರ್ದೇಶಕ ಡಾ.ಪಿ ವಿಷ್ಣುಮೂರ್ತಿ ಮಯ್ಯ ನುಡಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಪ್ರಸಿದ್ಧ ಹೃದ್ರೋಗ ತಜ್ಞೆ ಡಾ.ಪ್ರಭಾವತಿ,ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ತಾರಾನಾಥ ಹೊಳ್ಳ, ಸಮಾಜಸೇವಕ ಶ್ರೀಪತಿ ಅಧಿಕಾರಿ,ಶೌರ್ಯ ಪ್ರಶಸ್ತಿ ವಿಜೇತ ಮಾ.ಧೀರಜ್ ಐತಾಳ್ ಇವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗೋವಿಂದ ನಕ್ಷತ್ರಿ ಪುತ್ರ ಶಿಕ್ಷಕ ಡಾ. ಬಾಲಕೃಷ್ಣ ನಕ್ಷತ್ರಿ ಅಂಬಾಗಿಲುಕೆರೆ,ದಿ.ಜಯಂತಿ ಮಧ್ಯಸ್ಥ ಸ್ಮರಣಾರ್ಥ ಸದಾಶಿವ ಮಧ್ಯಸ್ಥ ಇವರು ಕೊಡಮಾಡಿದ ವಿದ್ಯಾನಿಧಿಯನ್ನು ವೇದಿಕೆಯಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ನೀಡಲಾಯಿತು.
ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ್ ಹಂದೆ ಶುಭಾಶಂಸನೆಗೈದರು.
ಕರ್ನಾಟಕ ರಾಜ್ಯ ನೌರಕರ ಸಂಘಕ್ಕೆ ಆಯ್ಕೆಯಾದ ಪಿ.ವೈ ಕೃಷ್ಣಪ್ರಸಾದ ಹೇರ್ಳೆ, ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಅಧ್ಯಕ್ಷರಾಗಿ ಅಯ್ಕೆಯಾದ ಸತೀಶ್ ಹಂದೆ, ಪ್ರದಾನಕಾರ್ಯದರ್ಶಿ ಸುರೇಶ ತುಂಗ,ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ಸ್ವಸ್ತಿಕ್ ಉಪಾಧ್ಯಾಯ ಇವರುಗಳಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು.

ಮುಖ್ಯ ಅಭ್ಯಾಗತರಾಗಿ ಅಘೋರೇಶ್ವರ ದೇಗುಲ ಕಾರ್ತಟ್ಟುಅಧ್ಯಕ್ಷ ಚಂದ್ರಶೇಖರ್ ಕಾರಂತ,ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಪ್ರದಾನಕಾರ್ಯದರ್ಶಿ ಸುರೇಶ ತುಂಗ,ಕೂಟಮಹಾಜಗತ್ತು ಅಂಗಸAಸ್ಥೆ ಸಾಲಿಗ್ರಾಮ ಅಧ್ಯಕ್ಷ ಪಿ.ಸಿ ಹೊಳ್ಳ ,ಯುವ ವೇದಿಕೆಯ ಮಾರ್ಗದರ್ಶಕರಾದ ಮಂಜುನಾಥ ಉಪಾಧ್ಯಾ,ಎ.ಪಿ ಅಡಿಗ ಅಸೋಸಿಯೇಟ್ಸ್ ಉಳ್ತೂರು ಮುಖ್ಯಸ್ಥ ಗಣೇಶ್ ಅಡಿಗ ಉಪಸ್ಥಿತರಿದ್ದರು. ಯುವ ವೇದಿಕೆಯ ಗೌರವಾಧ್ಯಕ್ಷ ಪಿ.ವೈ ಕೃಷ್ಣಪ್ರಸಾದ್ ಹೇರ್ಳೆ ಪ್ರಾಸ್ತಾವನೆಗೈದರು.ಯುವವೇದಿಕೆಯ ಅಧ್ಯಕ್ಷ ಗಿರೀಶ್ ಮಯ್ಯ ಅಧ್ಯಕ್ಷತೆಯನ್ನು ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಶ್ರೀಕಾಂತ್ ಐತಾಳ್ ವರದಿ ವಾಚಿಸಿದರು. ವೇದಿಕೆಯ ವೆಂಕಟೇಶ ಮಯ್ಯ,ರವಿರಾಜ್ ಉಪಾಧ್ಯಾ, ಸಚಿನ್ ಹೇರ್ಳೆ,ಪ್ರಶಾಂತ್ ಹೇರ್ಳೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮವನ್ನು ಯುವವೇದಿಕೆಯ ಪ್ರಮುಖರಾದ ಶಶಿಧರ ಮಯ್ಯ ನಿರೂಪಿಸಿದರು.ಜತೆ ಕಾರ್ಯದರ್ಶಿ ಪನ್ನವ ನಾವಡ ವಂದಿಸಿದರು

 

Related Articles

error: Content is protected !!