ಹೊಸದಿಲ್ಲಿ : ಚಲನಶೀಲ ವಲಯದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ಆಸಕ್ತ ಹೂಡಿಕೆದಾರರಿಗೆ ಭಾರತವು ಅತ್ಯಂತ ಪ್ರಶಸ್ತ ನೆಲೆಯಾಗಿದೆ. ಇಂತಹ ಹೂಡಿಕೆದಾರರಿಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲ ನೀಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶ್ವಾಸನೆ ನೀಡಿದ್ದಾರೆ.
ಭಾರತ್ ಮಂಡಪಮ್ ನಲ್ಲಿ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೊ 2025ನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತವು ಹಸಿರು ತಂತ್ರಜ್ಞಾನ, ಇವಿಎಸ್, ಹೈಡೋಜನ್ ಇಂಧನ ಮತ್ತು ಜೈವಿಕ ಇಂಧನಗಳ ಅಭಿವೃದ್ಧಿಗೆ ಪ್ರಾಧಾನ್ಯತೆ ನೀಡುತ್ತಿದೆ. ದಶಕಾಂತ್ಯದಲ್ಲಿ ಇವಿಎಸ್‌ಗಳ ಮಾರಾಟ ಪ್ರಮಾಣ 8 ಪಟ್ಟು ಅಧಿಕವಾಗಲಿದೆ. ದೇಶದ ಮೋಟಾ ರು ವಾಹನ ಉದ್ದಿಮೆಯ ಬೆಳವಣಿಗೆಗೆ ಮೇಕ್ ಇನ್ ಇಂಡಿಯಾ ಉಪಕ್ರಮವು ತುಂಬು ಪೂರಕವಾಗಿದೆ ಎಂದರು.