ಕುಂದಾಪುರ : ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜಿನ ರೋಟರಿ ನರಸಿಂಹ ಕಲಾಮಂದಿರದಲ್ಲಿ ಕುಂದಾಪುರ ‘ಸಮುದಾಯದ ಆಶ್ರಯದಲ್ಲಿ ನಿರ್ದಿಗಂತ ಮೈಸೂರು ತಂಡದವರು ಆಡಿದ ಮನೋಜ್ಞ ನಾಟಕ ಬರ್ಟೋಲ್ಟ್ ಬ್ರೆಕ್ಟ್ ನ ‘ ತಿಂಡಿಗೆ ಬಂದ ತುಂಡೇರಾಯ (ನಿ: ಶಕಿಲ್ ಅಹ್ಮದ್) ಬ್ರೆಕ್ಟ್ ನದ್ದೇ ಆದ ಎಪಿಕ್ ಥಿಯೇಟರ್ ಶೈಲಿಯಲ್ಲಿ ಆರಂಭದಲ್ಲೇ ಪ್ರೇಕ್ಷಕರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಮುಂದುವರೆಯಿತು
ಎರಡನೇ ಮಹಾಯುದ್ಧಕ್ಕೆ ಮೊದಲು ಜರ್ಮನಿಯ ಅಡಾಲ್ಫ್ ಹಿಟ್ಲರ್ ಹೇಗೆ ಸರ್ವಾಧಿಕಾರಿಯಾಗುವ ಲಕ್ಷಣಗಳನ್ನು ಬೆಳೆಸಿಕೊಂಡ ಅನ್ನುವುದನ್ನು ತೋರಿಸುವುದು ನಾಟಕದ ಉದ್ದೇಶವಾಗಿತ್ತು. ನಗರದ ಕಾಯಿಪಲ್ಲೆ ವ್ಯಾಪಾರವನ್ನು ಬಲಾತ್ಕಾರದಿಂದ ಮತ್ತು ಕುತಂತ್ರದಿಂದ ತನ್ನ ವಶಪಡಿಸಿ ಕೊಳ್ಳುವ ಒಬ್ಬ ರೌಡಿಯನ್ನಾಗಿ ಚಿತ್ರಿಸುವ ವಿಡಂಬನಾತ್ಮಕ ಶೈಲಿಯಲ್ಲಿ ಸಾಗಿದ ಗಂಭೀರ ಸಂದೇಶವುಳ್ಳ ಕಥೆ
ಎಲ್ಲ ಪಾತ್ರಧಾರಿಗಳ ಚುರುಕಾದ ಅಭಿನಯ ಮತ್ತು ಸಂಭಾಷಣೆಗಳ ಸಮರ್ಥ ನಿರ್ವಹಣೆ ಮತ್ತು ಸುಂದರ ಉತ್ತರ ಕರ್ನಾಟಕ ಭಾಷೆಯ ಬಳಕೆಯಿಂದ ತುಂಬ ಇಷ್ಟವಾದ ನಾಟಕವಾಗಿ ಮೂಡಿಬಂತು
ಪಾರ್ವತಿ ಜಿ.ಐತಾಳ್