ಹೊಸದಿಲ್ಲಿ: ಕಳೆದೊಂದು ದಶಕದಲ್ಲಿ ಬೇಟಿ ಬಚಾವೊ ಬೇಟಿ ಪಢಾವೊ ಜನಶಕ್ತಿಯಾಧಾರಿತ ಉಪಕ್ರಮವಾಗಿ ಪರಿವರ್ತಿತವಾಗಿದೆ. ಈ ಯೋಜನೆ ಜಾರಿಯಾಗಿ 10 ವರ್ಷ ಪೂರ್ತಿಯಾಗುತ್ತಿದೆ ಲಿಂಗ ತಾರತಮ್ಯವನ್ನು ತೊಡೆದು ಹಾಕಿ ಶಿಕ್ಷಣಾವಕಾಶ ಸಹಿತ ಇತರೆಲ್ಲಾ ಉತ್ತಮ ಅವಕಾಶಗಳ ಕನಸನ್ನು ಸಾಕಾರಗೊಳಿಸುವ ಹಕ್ಕು ಪ್ರತೀ ಹೆಣ್ಣು ಮಕ್ಕಳಿಗೂ ಇದೆ ಎಂಬ ಧನಾತ್ಮಕ ವಾತಾವರಣ ಸೃಜಿಸುವಲ್ಲಿ ಈ ಯೋಜನೆ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಹತ್ತು ವರ್ಷ ಪೂರೈಸಿದ ಬೇಟಿ ಬಚಾವೊ ಬೇಟಿ ಪಢಾವೊ ಆಂದೋಲನದಲ್ಲಿಂದು ಬದುಕಿನೆಲ್ಲಾ ರಂಗದ ಜನರು ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವುದು ನೆಮ್ಮದಿ ವಿಚಾರ. ಗಮನಾರ್ಹ ಮೈಲಿಗಲ್ಲು ದಾಖಲಿಸುವಲ್ಲಿ ಬೇಟಿ ಬಚಾವೊ ಯೋಜನೆ ಯಶಸ್ಸು ಕಂಡಿದೆ. ಇದಕ್ಕಾಗಿ ತುಂಬು ಸಮರ್ಪಣಾ ಭಾವದಿಂದ ಪರಿಶ್ರಮಿಸಿದ ವಿವಿಧ” ಸಮುದಾಯ ಸೇವಾ ಸಂಘಟನೆಗಳಿಗೆ ಕೃತಜ್ಞತೆ ಎಂದು ಪ್ರಧಾನಿ ಮೋದಿ ಎಕ್ಸ್‌ಗೆ ಹಾಕಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.