ಕುಂದಾಪುರ : ಭಾರತೀಯ ಸಂಸ್ಕೃತಿಯ ಅನಾವರಣದ ಬಹು ದೊಡ್ಡ ಹಬ್ಬವಾದ ಕುಂಭ ಮೇಳವು ಕೋಟ್ಯಾಂತರ ಜನರ ಪುಣ್ಯ ಸ್ನಾನವಾಗಿದೆ. ತ್ರಿವೇಣಿ ಸಂಗಮವೆನಿಸಿರುವ ಪ್ರಯಾಗ್ ರಾಜ್ ಕುಂಭ ಮೇಳವನ್ನು ಕೇಂದ್ರೀಕರಿಸಿ, 144ವ಼ರ್ಷಕ್ಕೊಮ್ಮೆ ನಡೆಯುವ ಅಮೃತ ಸ್ನಾನದ ಪಾಪ ಕರ್ಮ-ಮೋಕ್ಷಗಳ ಸಾಕಾರಗೊಳಿಸುವ ಮಹಾ ಕುಂಭ ಮೇಳದ ಕೃತಿ ರಚನೆ.
ಸ್ಯಾಂಡ್ ಥೀಂ’ ಉಡುಪಿ, ಕಲಾವಿದರುಗಳಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆಯವರಿಂದ ಕೋಟೇಶ್ವರ ಹಳೆ ಅಳಿವೆ ಕಡಲ ತೀರದಲ್ಲಿ 5 ಅಡಿ ಎತ್ತರ ಮತ್ತು 7 ಅಡಿ ಅಗಲಗಳುಳ್ಳ ಮರಳು ಶಿಲ್ಪಾಕೃತಿಯನ್ನು ರಚಿಸಲಾಯಿತು