ಕುಂದಾಪುರ: ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಲುವಾಗಿ ಮೂಕಾಂಬಿಕೆಯ ಸನ್ನಿಧಿಗೆ ಭೇಟಿ ನೀಡಿದ ಕರ್ನಾಟಕ ರಾಜ್ಯದ ಧಾರ್ಮಿಕ ಧತ್ತಿ ಇಲಾಖೆಯ ಮಾನ್ಯ ಆಯುಕ್ತರಾದ ಶ್ರೀ ಹೆಚ್ ಬಸವರಾಜೇಂದ್ರ ಅವರು ಅಷ್ಬಂಧ ಬ್ರಹ್ಮಕಲಶಾಭಿಷೇಕದಲ್ಲಿ ಪಾಲ್ಗೊಂಡರು ಮೂಕಾಂಬಿಕಾ ದೇವಿಗೆ ಪೂಜೆ ಸಲ್ಲಿಸಿದ ಅವರು ಬ್ರಹ್ಮಕಲಶಾಭಿಶೇಕದ ಪ್ರಾರಂಭದಿಂದಲೂ ಕೊನೆಯ ತನಕ ಅತ್ಯಂತ ಭಕ್ತಿಯಿಂದ ಎಲ್ಲಾ ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡರು ಅಷ್ಟಬಂಧ ಬ್ರಹ್ಮಕಲಶೋತ್ಸವದ ನಿಮಿತ್ತ ಆಯೋಜಿಸಲಾದ ವ್ಯವಸ್ಥೆಯ ಕುರಿತಂತೆ ಮಾಹಿತಿ ಪಡೆದಂತಹ ಆಯುಕ್ತರು ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯನ್ನ ವ್ಯಕ್ತ ಪಡಿಸಿದರು. ಜೊತೆಗೆ ಸಲಹೆ ಸೂಚನೆಯನ್ನ ನೀಡಿದರು. ದೇವಸ್ಥಾನದ ವತಿಯಿಂದ ಆಯುಕ್ತರಿಗೆ ದೇವರ ಪ್ರಸಾದ ನೀಡಿ ಗೌರವಿಸಲಾಯ್ತು. ಈ ಸಂದರ್ಭದಲ್ಲಿ ಕ್ಷೇತ್ರದ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ, ಗಣೇಶ್ ಕಿಣಿ ಬೆಳ್ವೆ ಹಾಗೂ ಸದಸ್ಯರೂ ಕಾರ್ಯನಿರ್ವಹಣಾಧಿಕಾರಿಗಳಾದ ಎಸ್. ಸಿ. ಕೋಟಾರಗಸ್ತಿ ಉಪಸ್ಥಿತರಿದ್ದರು