ಇದೊಂದು ಚಲನಚಿತ್ರ ಗೀತೆಯ ಬರೀ ಹೆಸರಲ್ಲ ನೀನು ನಕ್ಕರೆ ನಿನ್ನ ದೇಹ ಮತ್ತು ಮನಸ್ಸು ಯಾವಾಗಲೂ ಹಾಲು ಸಕ್ಕರೆಯಂತಿರುತ್ತದೆ ಇಂದು ವಿಶ್ವ ನಗು ದಿನ ನಾವು ನಕ್ಕರೆ ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಸಕಾರಾತ್ಮಕವಾದ ಪರಿಣಾಮ ಉಂಟಾಗಿ ದೇಹದ ಪ್ರತಿಯೊಂದು ಅಂಗವು ಕ್ರಿಯಾಶೀಲವಾಗಿರುತ್ತದೆ ಮನಸ್ಸು ಸದಾ ಉಲ್ಲಸಿತವಾಗಿರುತ್ತದೆ ನಗುವುದು ಒಂದು ಸಹಜ ಧರ್ಮ ಇನ್ನೊಬ್ಬರನ್ನು ನಗಿಸುವುದು ಪರಧರ್ಮ ತಾನು ನಕ್ಕು ಇನ್ನೊಬ್ಬರನ್ನು ನಗಿಸುವುದು ನಮ್ಮೆಲ್ಲರ ಧರ್ಮವಾದರೆ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯವೆಂಬುದೇ ನಮ್ಮೆಲ್ಲರ ನಂಬಿಕೆ ನಗು ಒಂದು ಅತ್ಯುತ್ತಮ ಔಷದ ಎಂಬ ಮಾತು ವೈದ್ಯಕೀಯ ವಲಯದಲ್ಲಿ ಇದೆ ನಗುವುದರಿಂದ ನಿರಾಳತೆ ಉಂಟಾಗುತ್ತದೆ ಮನಸ್ಸು ನಿರ್ಮಲವಾಗುತ್ತದೆ ಆಕರ್ಷಕವಾದ ನಗು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ಹಲವಾರು ಹೇಳುತ್ತಾರೆ ಅಧ್ಯಯನ ಒಂದರ ಪ್ರಕಾರ ನಗು ಆರೋಗ್ಯಕಷ್ಟೇ ಅಲ್ಲ ಆಯುಷ್ಯವೃದ್ಧಿಯಲ್ಲಿ ಕೆಲಸ ಮಾಡುತ್ತದೆ ಎನ್ನುವುದಕ್ಕೆ ಪೂರಕ ಅಂಶಗಳಿದೆ ಉತ್ತಮ ಹಾಸ್ಯ ಪ್ರಜ್ಞೆ ಉಳ್ಳವರಿಗೆ ಹೃದಯಾಘಾತ ಸಾಧ್ಯತೆ ಕೂಡ ತೀರಾ ಕಡಿಮೆ ಹಲವು ವರ್ಷಗಳ ಹಿಂದೆ ಕುಂದಾಪುರದಲ್ಲಿ ಜನರನ್ನು ನಗಿಸುವ ಸಲುವಾಗಿಯೇ ಹ….. ಹ……ಹ……ಎಂಬ ಹಾಸ್ಯ ಸಂಘವನ್ನು ಕೋಡಿ ರಮಾನಂದ ಕಾಮತ್ ಅವರು ಸ್ಥಾಪಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ನಮ್ಮ ಓದುಗರಿಗೆ ಹಿತೈಷಿಗಳಿಗೆ ಹಾಗೂ ಜಾಹೀರಾತುದಾರರಿಗೆ ವಿಶ್ವ ನಗು ದಿನದ ಹಾರ್ದಿಕ ಶುಭಾಶಯಗಳು
ಗಣೇಶ ಹೆಗ್ಡೆ ಕುಂದಾಪುರ.