ಉಡುಪಿ: ಅಭಿವೃದ್ಧಿ ಈ ಚುನಾವಣೆಯ ಪ್ರಮುಖ ವಿಷಯವಾಗಿತ್ತು. ಆದರೆ ಕಾಂಗ್ರೆಸಿಗರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕರ್ನಾಟಕದಲ್ಲಿ ವಿಷ ಸರ್ಪ, ಗುಜರಾತ್ನಲ್ಲಿ ಮೌತ ಕಾ ಸೌದಾಗರ್ ಮೊದಲಾದ ಅಪಶಬ್ಧಗಳನ್ನು ಬಳಸಿ ವ್ಯಂಗ್ಯವಾಡುತ್ತಿದ್ದಾರೆ. ಈ ಬಗ್ಗೆ ಮೋದಿಯವರು ಮೌನವಾಗಿದ್ದು, ಮೇ 10 ರಂದು ಕರ್ನಾಟಕದ ಜನತೆ ಸೇಡು ತೀರಿಸಿಕೊಂಡು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮಹಾರಾಷ್ಟ್ರ ಮುಖ್ಯ ಮಂತ್ರಿ ಏಕನಾಥ ಶಿಂಧೆ ಹೇಳಿದರು.
ಬಜರಂಗದಳ ಒಂದು ದೇಶಭಕ್ತ ಸಂಘಟನೆಯಾಗಿದ್ದು, ರಾಷ್ಟ್ರಕ್ಕೆ ಸಂಕಟ ಬಂದಾಗ ತಮ್ಮ ಪ್ರಾಣ ಒತ್ತೆಗಿಟ್ಟು ಕೆಲಸ ಮಾಡುತ್ತದೆ ? ಇಂಥ ಸಂಘಟನೆಯನ್ನು ಕಾಂಗ್ರೆಸ್ ಹೇಗೆ ಬ್ಯಾನ್ ಮಾಡುತ್ತದೆ ? ಬಜರಂಗಿ ಹಾಗೂ ಮೋದಿಯವರಿಗೆ ಮಾಡಿದ ಅವಮಾನಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಸೋಮವಾರ ಸುದ್ಧಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು