ಕುಂದಾಪುರ: ಕೊಲ್ಲೂರಿನ ಕೆರಾಡಿ ಎಂಬಲ್ಲಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು ಮತ್ತೋರ್ವರು ಖಾಸಗಿ ಆಸ್ಪತ್ರೆ ಸೇರಿದ ಘಟನೆ ವರದಿಯಾಗಿದೆ
ಕೆರಾಡಿ ಗ್ರಾಮದ ನಿವಾಸಿಗಳಾದ ಸುಶೀಲ ಹಾಗೂ ನಾಗರತ್ನ ಎಂಬವರು ಮತದಾನ ಮಾಡುವ ಸಲುವಾಗಿ ಕೆರಾಡಿ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಹೆಮ್ಮಕ್ಕಿ-ಕೆರಾಡಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅತೀ ವೇಗದಿಂದ ಬಂದ ಕಾರು ನಿಯಂತ್ರಣ ತಪ್ಪಿ ಹಿಂದಿನಿಂದ ಢಿಕ್ಕಿ ಹೊಡೆದಿದ್ದರಿಂದ ಸುಶೀಲ ಎಂಬವರು ಮೃತಪಟ್ಟು ನಾಗರತ್ನರವರನ್ನು ಕುಂದಾಪುರದ ಚನ್ಮಯಿ ಆಸ್ಪತ್ರೆಗೆ ಸೇರಿಸಲಾಗಿದೆ ಇಕೋ ಕಾರಿನ ಚಾಲಕ ಕೃಷ್ಣ ಕೋಠಾರಿಯ ಮೇಲೆ ಪ್ರಕರಣ ದಾಖಲಾಗಿದೆ