ಕುಂದಾಪುರ : ಉಡುಪಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತ ಎಣಿಕೆಯು ಇಂದು ಉಡುಪಿ ನಗರದ ಸೇಂಟ್ ಸಿಸಿಲಿ ಶಿಕ್ಷಣ ಸಂಸ್ಥೆಯ ಕೊಠಡಿಯಲ್ಲಿ ನಡೆಯಲಿದೆ ಮತ ಎಣಿಕೆ ಕಾರ್ಯವು ಒಟ್ಟು ಎಂಟು ಪ್ರತ್ಯೇಕ ಕೊಠಡಿಯಲ್ಲಿ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ
ಇಂದು ಬೆಳಿಗ್ಗೆ 8:00ಗೆ ಆರಂಭವಾಗಲಿರುವ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ತಲಾ ಒಂದು ಕೊಠಡಿ ಹಾಗೂ ಉಡುಪಿ ಕಾರ್ಕಳ ಕಾಪು ವಿಧಾನಸಭಾ ಕ್ಷೇತ್ರದ ಎಣಿಕೆಯನ್ನು ತಲಾ ಎರಡು ಕೊಠಡಿಗಳಲ್ಲಿ ನಡೆಸಲಾಗುವುದು ಎಣಿಕೆ ಕಾರ್ಯವನ್ನು ಸುಸೂತ್ರವಾಗಿ ಸುರಕ್ಷಿತವಾಗಿ ನಡೆಸಲು ಮತ ಎಣಿಕೆ ಅಧಿಕಾರಿಗಳು ಹಾಗೂ ಮತ ಎಣಿಕೆ ಗಳ ಎಜೆಂಟ್ ಗಳ ನಡುವೆ ಮೆಸ್ ಹಾಕಿ ಸೂಕ್ತ ಭದ್ರತೆಯನ್ನು ಮಾಡಲಾಗಿದ್ದು ಮತ ಎಣಿಕೆ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಮಾಹಿತಿ ನೀಡಿದರು ಆರಂಭದಲ್ಲಿ ಅಂಚೆ ಮತ ಪತ್ರಗಳ ಎಣಿಕೆಯನ್ನು ಚುನಾವಣಾಧಿಕಾರಿಯವರ ಕೊಠಡಿಯಲ್ಲಿ ನಡೆಸಲಾಗುವುದು ನಂತರ ಈವಿಎಂ ಮತ ಎಣಿಕೆ ಕಾರ್ಯ ನಡೆಯಲಿದೆ ಐದು ಚುನಾವಣಾ ಅಧಿಕಾರಿ ಹಾಗೂ ಐದು ಮಂದಿ ಹೆಚ್ಚುವರಿ ಸಹಾಯಕ ಚುನಾವಣಾ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ನಿಗದಿತ ಕೊಠಡಿಯಲ್ಲಿ ಮತ ಎಣಿಕೆ ಪ್ರಕ್ರಿಯೆ ಜರುಗಲಿದೆ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ಮತಯಂತ್ರಗಳ ಮತ ಎಣಿಕೆಗೆ 14 ಟೇಬಲ್ ಗಳನ್ನು ವ್ಯವಸ್ಥೆ ಮಾಡಲಾಗಿದೆ