Home » ಇನ್ನೂ ಎಚ್ಚೆತ್ತುಕೊಳ್ಳದ ಕುಂದಾಪುರ ಪುರಸಭೆ…
 

ಇನ್ನೂ ಎಚ್ಚೆತ್ತುಕೊಳ್ಳದ ಕುಂದಾಪುರ ಪುರಸಭೆ…

by Kundapur Xpress
Spread the love

ಇನ್ನೂ ಎಚ್ಚೆತ್ತುಕೊಳ್ಳದ ಕುಂದಾಪುರ ಪುರಸಭೆ…

ಕುಂದಾಪುರ : ಕುಂದಾಪುರ ಪುರಸಭೆಯ ನಗರ ವ್ಯಾಪ್ತಿಯಲ್ಲಿ ಚರಂಡಿಗಳನ್ನು ಹೂಳೆತ್ತದೇ ಬೃಹದಾಕಾರವಾಗಿ ಬೆಳೆದ ಮರ ಮಟ್ಟುಗಳನ್ನು ಕಡಿಯದೆ ಪುರಸಭೆಯ ಮುಖ್ಯಾಧಿಕಾರಿಗಳಿಂದ ಹಿಡಿದು ಅಧಿಕಾರಿ ವರ್ಗ ದವರು ಅಸಡ್ಡೆ ತೋರಿಸುತ್ತಿದ್ದಾರೆಂದು ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬರುತ್ತಿದ್ದು ಸ್ವಚ್ಚ ಕುಂದಾಪುರ ಸುಂದರ ಕುಂದಾಪುರ ಎನ್ನುವುದು ಕೇವಲ ನಾಮಫಲಕಕಷ್ಟೇ ಸೀಮಿತವಾಗಿದೆ

ಈಗಾಗಲೇ ಮುಖ್ಯಾಧಿಕಾರಿ ಮಂಜುನಾಥ್‌ ರವರು ಸಾರ್ವಜನಿಕರ ಭೇಟಿಗೆ ಸಮಯ ನಿಗದಿ ಪಡಿಸಿದ್ದರಿಂದ ವ್ಯಕ್ತವಾದ ವ್ಯಾಪಕ ಟೀಕೆಯ  ಹಿನ್ನಲೆಯಲ್ಲಿ ಆ ಆದೇಶವನ್ನು ಹಿಂಪೆಡೆದಿದ್ದು ಒಂದು ವಾರಗಳ ಕಾಲ ಕುಂದಾಪುರದ ನಾಗರಿಕರಿಗೆ ಉಪ್ಪು ನೀರು ಕುಡಿಸಿದ್ದೇ ಇವರ ಬಹುದೊಡ್ಡ ಸಾಧನೆಯಾಗಿದೆ

ಆರಂಭದಲ್ಲಿ ಕುಂದಾಪುರದ ನಾಗರೀಕರಿಗೆ ಸರಬರಾಜಾಗುತ್ತಿದ್ದ ವಾರಾಹಿ ನೀರು ಪನ್ನೀರಿನಂತಿದ್ದು ಇತ್ತೀಚಿನ ದಿನಗಳಲ್ಲಿ ಈ ನೀರು ತನ್ನ ಗುಣಮಟ್ಟವನ್ನೇ ಕಳೆದುಕೊಂಡಿದೆ ಆರಂಭದಲ್ಲಿ ವಾರಾಹಿ ನೀರಿನ ಟಿ ಡಿ ಎಸ್‌ 40-50 ರ ಒಳಗೆ ಇದ್ದು ಇದೀಗ ಇದೇ ನೀರಿನ ಗುಣಮಟ್ಟ 300 ರಿಂದ 400 ಟಿ‌ ಡಿ ಎಸ್ ಆಗಿದ್ದು ಅಧಿಕಾರಿಗಳ ಬೇಜವಭ್ದಾರಿಯಲ್ಲದೇ ಮತ್ತೇನು….?

ಕಾಲಕಾಲಕ್ಕೆ ನೀರಿನ ಗುಣಮಟ್ಟವನ್ನು ಪರೀಕ್ಷಿಸಿದ ವರದಿಯನ್ನು ಕೇಳುವವರೇ ಇಲ್ಲಾ…!!!

ಇದೀಗ ಕುಂದಾಪುರ ನಗರದ ಜನತೆಗೆ ಅಪಾಯಕಾರಿ ಮರಗಳ ಭೀತಿ ಕಾಡುತ್ತಿದ್ದು  ವಾಹನಗಳ ಸಂಚಾರದ ವೇಳೆ ರಸ್ತೆಗೆ ಮರಗಳು ಮುರಿದು ಬೀಳುವ ಆತಂಕವನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ  ನಗರದ ಹಲವೆಡೆಗಳಲ್ಲಿ ರಸ್ತೆ ಬದಿಯಲ್ಲಿ  ಇರುವ ಅಪಾಯ ಉಂಟು ಮಾಡುವ ಅನೇಕ  ಮರಗಳಿವೆ. ಮಳೆಗಾಲದಲ್ಲಿ ಬಿರುಗಾಳಿಯ ಸಾಧ್ಯತೆ ದಟ್ಟವಾಗಿದ್ದು, ರಸ್ತೆಯಲ್ಲಿ ವಾಹನ ಸಂಚಾರದ ವೇಳೆಯೇ ಮರಗಳು ಮುರಿದುಬೀಳುವ  ಸಾಧ್ಯತೆಗಳಿವೆ. ಇದರಿಂದ ಜೀವ ಹಾನಿ ಆಗುವ ಅಪಾಯಗಳಿದ್ದು, ಆದಷ್ಟು ಶೀಘ್ರವೇ ಅವುಗಳ ಕಟಾವು ಕಾರ್ಯ ನಡೆಯಬೇಕಾಗಿದೆ. ಕೆಲವು ದಿನಗಳ ಹಿಂದೆ ನಗರದ ಚಿಕ್ಕನ್‌ಸಾಲ್‌ ರಸ್ತೆಯಲ್ಲಿ ಯಾವದೇ ಗಾಳಿ ಮಳೆ ಇಲ್ಲದೇ ಮರದ ಟೊಂಗೆಯೊಂದು ಮುರಿದು ಬಿದ್ದು ಅನಾಹುತ ಉಂಟಾಗಿದ್ದು ಅದರ ಕೆಳಭಾಗದಲ್ಲೇ ಹಾದು ಹೋಗಿರುವ ವಿದ್ಯುತ್ ತಂತಿಗಳ ಮೇಲೆ ಬಿದ್ದು, ವಿದ್ಯುತ್ ಕಂಬಗಳೂ ಮುರಿದಿದ್ದು ದೇವರ ದಯೆಯಿಂದ ಯಾವುದೇ ಪ್ರಾಣಹಾನಿಯಾಗಿಲ್ಲ ಮಳೆಯ ಸಂದರ್ಭದಲ್ಲಿ ಸಿಡಿಲು ಹಾಗೂ ಗಾಳಿಯ ಅಬ್ಬರವೂ ಅಧಿಕವಾಗುತ್ತದೆ. ಇದರಿಂದ ರಸ್ತೆಯ ಅಂಚಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳು ಮುರಿದು ಬೀಳುವ ಸಾಧ್ಯತೆ ದಟ್ಟವಾಗಿದ್ದು ದುರಂತ ಸಂಭವಿಸುವ ಮುನ್ನವೇ ಕುಂದಾಪುರ ಪುರಸಭೆಯ ಅಧಿಕಾರಿಗಳು ಎಚ್ಚರ ವಹಿಸುವುದು ಇಂದಿನ ತುರ್ತು ಅಗತ್ಯವಾಗಿದೆ

ಕೆ ಗಣೇಶ್‌ ಹೆಗ್ಡೆ ,ಕುಂದಾಪುರ

   

Related Articles

error: Content is protected !!