ಕುಂದಾಪುರ ನಗರದ ಆಂಜನೇಯ ಸ್ಟೋರ್ಸ್ ಎದುರುಗಡೆ ರಸ್ತೆಯ ನಿವಾಸಿಯಾಗಿರುವ ಹಾಗೂ ಕುಂದಾಪುರ GSB ಸಮಾಜದ ಹಿರಿಯರಾದ ಶ್ರೀ ಕೃಷ್ಣಾನಂದ ಶೆಣೈಯವರು ನಿನ್ನೆ ಸಂಜೆ ತಮ್ಮ ಸ್ವಗೃಹದಲ್ಲಿ ನಿಧನ ಹೊಂದಿದರು ಅವರಿಗೆ 93 ವರ್ಷ ವಯಸ್ಸಾಗಿತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಶೆಣೈಯವರು ಉಪ ತಹಶೀಲ್ದಾರ್ ಆಗಿ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಅವರು ಒರ್ವ ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದು ಇಂದು ಬೆಳಿಗ್ಗೆ 8 ಗಂಟೆಗೆ ಮೃತರ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಲಿದೆ