350
ಕುಂದಾಪುರ : ಮಂಗಳೂರು ವಿಶ್ವವಿದ್ಯಾನಿಲಯದ ಪ್ರಥಮ ವರ್ಷದ ಮೊದಲ ಸೆಮಿಸ್ಟರ್ ನಲ್ಲಿ ಬಿ ಕಾಂ ಮತ್ತು ಬಿ ಸಿ ಎ ಪರೀಕ್ಷೆಗಳಲ್ಲಿ ಬಂದ ಉತ್ತಮ ಫಲಿತಾಂಶಕ್ಕಾಗಿ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ಸಿದ್ಧಾರ್ಥ ಜೆ. ಶೆಟ್ಟಿ ಹರ್ಷ ವ್ಯಕ್ತ ಪಡಿಸಿದ್ದಾರೆ.
ಅನ್ಯ ಚಟುವಟಿಕೆ ಹಾಗೂ ಕಲಿಕೆಯ ನಡುವೆ ಐಎಂಜೆಐಎಸ್ ಸಿ ಸಂಸ್ಥೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡಿರುವುದು ಹೆಮ್ಮೆ ತಂದಿದೆ ಎಂದು ಅವರು ತಿಳಿಸಿದ್ದಾರೆ
ವಿದ್ಯಾ ಸಂಸ್ಥೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯೂರಿಟಿ, CA, CS, ಅಕೌಂಟಿಂಗ್ ಮತ್ತು ಟಾಕ್ಸಾಷನ್ ಸೇರಿದಂತೆ ಅನೇಕ ಹೆಚ್ಚುವರಿ ವಿಷಯಗಳ ಅಧ್ಯಯನ ನಡೆಯುತ್ತಿದ್ದು, ಅವುಗಳನ್ನು ಕಲಿಯುತ್ತಾ ಪದವಿ ವಿಷಯಗಳಲ್ಲಿ ಉತ್ತಮ ಅಂಕ ಪಡೆದಿರುವುದು ಸಂಸ್ಥೆಗೆ ಸಾರ್ಥಕತೆಯ ಭಾವ ತಂದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿ ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ

