ಮಕ್ಕಳ ಕಳ್ಳರು:ಜಾಲತಾಣದಲ್ಲಿ ವೈರಲ್
ಕುಂದಾಪುರ : ಕುಂದಾಪುರ ನಗರದ ಬರೆಕಟ್ಟು ರಸ್ತೆಯಲ್ಲಿ ಮಕ್ಕಳ ಕಳ್ಳರಿದ್ದಾರೆಂಬ ಸುದ್ದಿಯು ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು
ಈ ಬಗ್ಗೆ ವಿಚಾರಣೆ ಕೈಗೊಂಡ ಪೊಲೀಸ್ ನಿರೀಕ್ಷಕರಾದ ನಂದಕುಮಾರ್ ರವರು ಸಂಬಂಧಪಟ್ಟ ವ್ಯಕ್ತಿಗಳನ್ನು ಠಾಣಿಗೆ ಕರೆಸಿ ವಿಚಾರಣೆ ನಡೆಸಿದ್ದು ಇದೊಂದು ಊಹಾಪೋಹ ಸುದ್ದಿ ಎಂದು ತಿಳಿಸಿದ್ದು ಸಾರ್ವಜನಿಕರು ಇಂತಹ ಸುದ್ದಿಗಳಿಗೆ ಕಿವಿಗೊಡಬಾರದು ಎನಾದರೂ ಸಂಶಯ ಬಂದಲ್ಲಿ ನೇರವಾಗಿ ಠಾಣೆಯನ್ನು ಸಂಪರ್ಕಿಸಬೇಕೆಂದು ಕೋರಿದ್ದಾರೆ
ಘಟನೆಯ ಹಿನ್ನಲೆ : ಕುಂದಾಪುರ ನಗರದ ವ್ಯಕ್ತಿಯೊಬ್ಬರು ತನ್ನ ಕಾರಿನಲ್ಲಿದ್ದ ಗಿರಿಗಿಟ್ಲೆ (ಗಾಳಿಗೆ ತಿರುಗುವ ಆಟಿಕೆ) ಯೊಂದನ್ನು ಬರೆಕಟ್ಟು ಪರಿಸರದಲ್ಲಿ ಬಾಲಕಿಗೆ ನೀಡಲು ಹೋಗಿದ್ದು ಬಾಲಕಿಯು ಹೆದರಿಕೊಂಡು ಓಡಿಹೋಗಿ ಮನೆಯವರಿಗೆ ವಿಷಯ ತಿಳಿಸಿದ್ದು ಮಕ್ಕಳ ಕಳ್ಳರ ಸುದ್ದಿ ವೈರಲ್ ಆಗಲು ಕಾರಣವಾಯಿತು ಕಾರಿನಲ್ಲಿದ್ದ ವ್ಯಕ್ತಿಯು ಕುಂದಾಪುರ ನಗರದ ಗೌರವಾನ್ವಿತ ವ್ಯಕ್ತಿಯಾಗಿದ್ದು ತೆರಿಗೆ ಪಾವತಿದಾರರಾಗಿದ್ದಾರೆ (INCOME TAX PAYER) ಪ್ರಕರಣವನ್ನು ಇಲ್ಲಿಗೆ ಸುಖಾಂತ್ಯಗೊಳಿಸಲಾಗಿದೆ